*ಗೋಣಿಕೊಪ್ಪಲು, ಸೆ. 15 : ಕುಟ್ಟ ಅರಣ್ಯ ತನಿಖಾ ಠಾಣೆಯ ಮುಂಭಾಗ ವಾಹನ ತಪಾಸಣೆ ಸಂದರ್ಭ ಲಕ್ಷಾಂತರ ಮೌಲ್ಯದ ಬೀಟೆ ನಾಟಾಗಳನ್ನು ತರಕಾರಿ ಸಾಗಿಸುವ ವಾಹನದಲ್ಲಿ ಬಚ್ಚಿಟ್ಟು ಕೇರಳದ ತಲಚೇರಿಗೆ ಸಾಗಿಸುವ ಸಂದರ್ಭ ಪೆÇನ್ನಂಪೇಟೆ ಅರಣ್ಯ ಇಲಾಖೆ ತಂಡ ಬಯಲಿಗೆಳೆದಿದೆ.
ಕೇರಳದ ತಲಚೇರಿಗೆ ಮಾಕುಟ್ಟ ಮಾರ್ಗ ಹತ್ತಿರದ ದಾರಿ ಇದ್ದರೂ 20 ದಿನದ ಹಿಂದೆ ಮಾಕುಟ್ಟ ಅರಣ್ಯ ಅಪರಾಧ ತನಿಖಾ ತಂಡ ಈಚರ್ ವಾಹನದಲ್ಲಿ ತರಕಾರಿಯೊಳಗೆ ಬಚ್ಚಿಟ್ಟು ಸಾಗಿಸುತ್ತಿದ್ದ ಬೀಟೆ ಮರವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆ ಮಾನಂದವಾಡಿ ಮಾರ್ಗ ನಿನ್ನೆ ರಾತ್ರಿ ವೇಳೆ ಬೀಟೆ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಸಂದರ್ಭ ಮಾಲು ಸಹಿತ ಲಕ್ಷಾಂತರ ಮೌಲ್ಯದ ಬೀಟೆ ಮರ ಹಾಗೂ ವಾಹನವನ್ನು ಇಲಾಖಾ ತಂಡ ವಶಕ್ಕೆ ಪಡೆದಿದ್ದಾರೆ.
ಪಿಕ್ ಅಪ್ ಬೊಲೆರೋ ವಾಹನವು ಹುಣಸೂರಿನಿಂದ ತರಕಾರಿ ತುಂಬಿಕೊಂಡು ಇಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಕುಟ್ಟ ಅರಣ್ಯ ಚೆಕ್ಪೆÇೀಸ್ಟ್ ತಲುಪಿತ್ತು. ಇದೇ ಸಂದರ್ಭ ರಾತ್ರಿ ಗಸ್ತಿನಲ್ಲಿದ್ದ ಉಪ ವಲಯಾರಣ್ಯಾಧಿಕಾರಿ ರವಿಕಿರಣ್ ಹಾಗೂ ತನಿಖಾ ಠಾಣೆ ಅರಣ್ಯ ವೀಕ್ಷಕ ವಿನೋದ್ಕುಮಾರ್ ವಾಹನ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹುಣಸೂರಿನಿಂದ ತರಕಾರಿ ತುಂಬಿಕೊಂಡು ಬಂದು, ಬಾಳೆಲೆ ಸಮೀಪ ದೇವನೂರು ಗ್ರಾಮದಲ್ಲಿ ಸುಮಾರು 21 ಬೀಟೆ ನಾಟಾಗಳನ್ನು ಪಿಕ್ಅಪ್ ವಾಹನಕ್ಕೆ ತುಂಬಿಸಿ ಕೊಳ್ಳಲಾಯಿತು ಎನ್ನಲಾಗಿದೆ. ಸ್ನೇಹಿತರಾದ ಬೇಬಿ ಹಾಗೂ ಅಜಾದ್ ಎಂಬವರ ಸಹಾಯದಿಂದ ಮರದ ನಾಟಾಗಳನ್ನು ವಾಹನಕ್ಕೆ ತುಂಬಿಸಲಾಗಿತ್ತು ಎಂದು ಬಂಧಿತ ವಾಹನ ಚಾಲಕ ಆರೋಪಿ ಅಸ್ಗರ್(40) ವಿಚಾರಣೆ ಸಂದರ್ಭ ಮಾಹಿತಿ ನೀಡಿದ್ದಾನೆ.
ಕಾರ್ಯಾಚರಣೆಯಲ್ಲಿ ಕುಟ್ಟ ಅರಣ್ಯ ಶಾಖೆ ಉಪ ವಲಯ ಅರಣ್ಯಾಧಿಕಾರಿ ಸಿ.ಡಿ.ಬೋಪಣ್ಣ, ಅರಣ್ಯ ರಕ್ಷಕರಾದ ರಾಜೇಶ್, ಸುಜಯ್ ಹಾಗೂ ಚೇತನ್ ಪಾಲ್ಗೊಂಡಿದ್ದರು. ಆರೋಪಿ ಅಸ್ಗರ್ನನ್ನು ಇಂದು ಸಂಜೆ ಪೆÇನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಗಿರಿಗೌಡ ಅವರು ಅಸ್ಗರ್ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶಿಸಿದ್ದಾರೆ.