ಮಡಿಕೇರಿ, ಸೆ. 15: ‘ಚಿಂತೆ ಮಾಡಬೇಡಿ. ನಿಮ್ಮ ಕಡತಗಳು (ಫೈಲ್‍ಗಳು) ನಿಮಗೆ ಮತ್ತೆ ಲಭಿಸಲಿವೆ. ನಿಮ್ಮ ದಾಖಲೆಗಳು, ಚಿತ್ರಗಳು ಹಾಗೂ ಇತರ ಎಲ್ಲ ಮಾಹಿತಿಗಳು ‘ಎನ್‍ಕ್ರಿಪ್ಟೆಡ್’ ಆಗಿವೆ (ಭದ್ರವಾಗಿವೆ). ಅದನ್ನು ‘ಡೀಕ್ರಿಪ್ಟ್’ ಅಂದರೆ ನಿಮ್ಮ ಕಡತಗಳು ಸೇರಿದಂತೆ ಎಲ್ಲಾ ಮಾಹಿತಿಗಳು ನೀವು ಪುನಃ ಬಳಸಬೇಕಾದಲ್ಲಿ ‘ಡೀಕ್ರಿಪ್ಟ್ ಟೂಲ್’ ಸಾಫ್ಟ್‍ವೇರ್ ಜೊತೆ ‘ಯುನೀಕ್ ಕೀ’ (ಪಾಸ್‍ವರ್ಡ್) ಅವಶ್ಯಕತೆ ಇದೆ. ಇದನ್ನು ಖರೀದಿಸಲು ನಮ್ಮ ಇ–ಮೇಲ್ ಅನ್ನು ಸಂಪರ್ಕಿಸಿ 980 ಡಾಲರ್ ನಷ್ಟು ಹಣ ಪಾವತಿಸಿ’. ಇದು ಕುಶಾಲನಗರದ ‘ಸನ್ ಮೈಕ್ರೋಟೆಕ್ ಐಟಿ ಸಲೂಷನ್ಸ್’ ಸಂಸ್ಥೆ ಅವರು ತಮ್ಮ ಸರ್ವರ್‍ನಲ್ಲಿರುವ ಯಾವುದೇ ಫೋಲ್ಡರ್ ತೆರೆದರು ಅದರಲ್ಲಿನ ಕಡತ (ಫೈಲ್) ದಲ್ಲಿ ಕಾಣುವ ಸಂದೇಶ. ಕುಶಾಲನಗರ ರಥಬೀದಿಯಲ್ಲಿರುವ ಈ ಸಂಸ್ಥೆಯ ಮಾಲೀಕ ಕೆ.ಪಿ ಚಂದ್ರಶೇಖರ್ ಅವರು ಜಿಲ್ಲಾ ಸೈಬರ್ ಕ್ರೈಮ್‍ಗೆ ನೀಡಿದ ದೂರಿನ ಪ್ರಕಾರ ತಾ. 10 ರಂದು ಸಂಸ್ಥೆಯ ಸರ್ವರ್‍ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಪರಿಶೀಲಿಸಿದಾಗ ‘ಖಂಓSಔಒWಂಖಇ.ಔಉಆಔ’ ಎಂಬ ವೈರಸ್ ಪತ್ತೆಯಾಗಿದ್ದು, ಪ್ರತಿಯೊಂದು ಫೋಲ್ಡರ್‍ನಲ್ಲಿ ಮೇಲ್ಕಂಡಂತೆ ಸಂದೇಶ ಕಾಣಿಸಿಕೊಂಡಿದೆ. ಮುಂದುವರೆದು 3
(ಮೊದಲ ಪುಟದಿಂದ) ದಿನಗಳೊಳಗೆ ನಮ್ಮನ್ನು ಸಂಪರ್ಕಿಸಿದರೆ ‘ಡೀಕ್ರಿಪ್ಟ್ ಸಾಫ್ಟ್‍ವೇರ್’ ಅನ್ನು 480 ಡಾಲರ್‍ಗಳು ನೀಡಿ ಪಡೆಯಬಹುದು ಎಂದು ಕೂಡ ಬರೆಯಲಾಗಿದೆ.
ಸಾಫ್ಟ್‍ವೇರ್ ಖರೀದಿಸಲು heಟಠಿmಚಿಟಿಚಿgeಡಿ@mಚಿiಟ.ಛಿh ಅಥವಾ ಡಿesಣoಡಿemಚಿಟಿಚಿgeಡಿ@ಚಿiಡಿmಚಿiಟ.ಛಿಛಿ ಅನ್ನು ಸಂಪರ್ಕಿಸುವಂತೆಯೂ ಸಂದೇಶದಲ್ಲಿ ತಿಳಿಸಿದ್ದಾರೆ. ಮೇಲ್ಕಂಡ ಸಂಸ್ಥೆ ಸೇರಿದಂತೆ, ಸಂಸ್ಥೆಯ ಸರ್ವರ್‍ನಲ್ಲಿದ್ದ ಇನ್ನು 3 ಸಂಸ್ಥೆಗಳ(ಮಣಿಪಾಲ್ ಇನ್‍ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಎಜುಕೇಷನ್, ಸನ್ ಮೈಕ್ರೋಟೆಕ್ ಕಂಪ್ಯೂಟರ್ ಸರ್ವಿಸಸ್, ಮೈಕ್ರೋಟೆಕ್ ಇನ್‍ಫಾರ್‍ಮೇಶನ್ ಟೆಕ್ನಾಲಜೀಸ್) ಸಂಪೂರ್ಣ ದಾಖಲಾತಿಗಳು, ಇನ್‍ಕಂ ಟ್ಯಾಕ್ಸ್, ಟ್ಯಾಲಿ ಸೇಲ್ಸ್ ಪರ್‍ಚೇಸ್ ಹಾಗೂ ಇನ್ನಿತರ ಮಾಹಿತಿಗಳು ಸಂಪೂರ್ಣ ಹಾನಿಯಾಗಿದೆ. ದುಷ್ಕರ್ಮಿಗಳು ಸಂಸ್ಥೆಗೆ ಇ – ಮೇಲ್ ಮಾಡಿ ‘ಫಿಶ್ಶಿಂಗ್’ ಮಾಡಿರುವುದಾಗಿ, ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಚಂದ್ರಶೇಖರ್ ಅವರು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದಾರೆ.
ಅನಾಮಧೇಯ ಇಮೇಲ್ ಕ್ಲಿಕ್ ಮಾಡುವುದರಿಂದ ಇಂತಹ ಸಮಸ್ಯೆಗಳು ಉಂಟಾಗಲಿದ್ದು, ಜನತೆ, ಸಂಸ್ಥೆಗಳ ಗುರುತು, ಪರಿಚಯವಿಲ್ಲದ ಇಮೇಲ್‍ಗಳು ಬಂದರೆ ಅಂತಹವುಗಳನ್ನು ತೆರೆಯಬಾರದೆಂದು ಕೊಡಗು ಜಿಲ್ಲಾ ಐಟಿ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಚಂದ್ರಶೇಖರ್ ಮನವಿ ಮಾಡಿಕೊಂಡಿದ್ದಾರೆ.