ಮಡಿಕೇರಿ, ಸೆ. 14: ತಲಕಾವೇರಿ-ಭಾಗಮಂಡಲ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಜಗದೀಶ್ ಕುಮಾರ್ ಬಡ್ತಿಯೊಂದಿಗೆ ವರ್ಗಾವಣೆಗೊಂಡಿದ್ದಾರೆ. ಅವರನ್ನು ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ವಿಭಾಗದ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ. ತೆರವಾದ ಜಗದೀಶ್ ಕುಮಾರ್ ಅವರ ಸ್ಥಾನಕ್ಕೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದ ಬಿ.ಎಂ. ಕೃಷ್ಣಪ್ಪ ಎಂಬವರು ಬಡ್ತಿ ಹೊಂದಿ ನೇಮಕಗೊಂಡಿದ್ದಾರೆ.