ಅಧ್ಯಾಯ 8: ಪ್ರಯತ್ನ ಬಿಡಬೇಡ: ದೇವರ ಧ್ಯಾನದಲ್ಲಿ ಪ್ರಾಮಾಣಿಕವಾಗಿ ತೊಡಗಿರು ವವನಿಗೆ ದೇವರು ಸಿಕ್ಕೇ ಸಿಗುತ್ತಾನೆ. ಪ್ರಯತ್ನ ಬಿಡಕೂಡದು ಎಂದು ಹೇಳುತ್ತಾನೆ.
ಅಧ್ಯಾಯ 9: ದೇವರ ಧ್ಯಾನದಿಂದ ನನ್ನ ಸೇರಬಹುದು
ಈ ಜಗತ್ತೆಲ್ಲಾ ಕಣ್ಣಿಗೆ ಕಾಣದ ನನ್ನಿಂದ ತುಂಬಿರುವುದು. ಈ ಎಲ್ಲಾ ವಸ್ತುಗಳೂ ನನ್ನಲ್ಲಿ ಇರುವುವು, ಆದರೆ ನಾನು ಅವುಗಳಲ್ಲಿ ಇಲ್ಲ. ಯಾವ ಜನರು, ತಮ್ಮ ಆತ್ಮವೆಂದು ನನ್ನನ್ನು ಧ್ಯಾನ ಮಾಡುತ್ತಾರೋ, ನಾನು ಅವರ ಯೋಗಕ್ಷೇಮ ಹೊರೆ ಹೊರುತ್ತೇನೆ ಎನ್ನುತ್ತಾನೆ.
ಅಧ್ಯಾಯ 10: ಕರ್ಮಕ್ಕೆ ತಕ್ಕ ಫಲ ಪ್ರಾಪ್ತಿ: ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿಪಡು. ಜಗತ್ತಿನಲ್ಲಿ ದೇವರಿರುವುದಲ್ಲ, ದೇವರೊಳಗೆ ಸಂಪೂರ್ಣ ಜಗತ್ತಿದೆ. ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ.
ಅಧ್ಯಾಯ 11: ವಿಶ್ವರೂಪ ದರ್ಶನ: ಈಶ್ವರತ್ವದ ರೂಪವನ್ನು ನೋಡುವ ಆಸೆಯನ್ನು ಅರ್ಜುನ ವ್ಯಕ್ತಪಡಿಸುತ್ತಾನೆ. ಇದರಿಂದ ಕೃಷ್ಣನು ತನ್ನ ಆದಿಅಂತ್ಯವಿಲ್ಲದ ಪ್ರಕಾಶಮಾನವಾದ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಇದನ್ನು ನೋಡಿ ಅರ್ಜುನ ಬೆರಗಾಗಿ ಶರಣಾಗುತ್ತಾನೆ. ಸತ್ಯವನ್ನು ಅರಿಯದಿದ್ದುದಕ್ಕೆ ಕ್ಷಮೆಯಾಚಿಸುತ್ತಾನೆ. (ಮುಂದುವರಿಯುವುದು) (ಆಧಾರ)
ನುಗ್ಗೆಯಲ್ಲಿ ಆರೋಗ್ಯ ಭಾಗ್ಯ
ಪ್ರತಿಯೊಬ್ಬರೂ ಮನೆಯಂಗಳ ದಲ್ಲಿ ಬೆಳೆಯಬಹುದಾದ ನುಗ್ಗೇಮರ ಪರೋಕ್ಷವಾಗಿ ವೈದ್ಯನಿದ್ದಂತೆ. ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತದೆ. ಇದು ಔಷದೀಯ ಗುಣವನ್ನು ಹೊಂದಿದ್ದು, ಇದರಲ್ಲಿ ಪೋಷಕಾಂಶಗಳ ಆಗರವೇ ತುಂಬಿದೆ ಎಂದು ಹೇಳಬಹುದು. ಅದರಲ್ಲಿ ಬಿಡುವ ಕಾಯಿ, ಹೂ ಹಾಗೂ ಸೊಪ್ಪು ಎಲ್ಲವೂ ಆರೋಗ್ಯಕರವಾದದ್ದು, ಹೆಚ್ಚು ಪೆÇ್ರೀಟೀನ್ ಅಂಶಗಳನ್ನು ಒಳಗೊಂಡಿದ್ದಾಗಿದೆ. ಇದರ ಬೇರು ಮತ್ತು ತೊಗಟೆ ಕೂಡಾ ಅತೀ ಹೆಚ್ಚು ಪರಿಣಾಮಕಾರಿಯಾಗಿದ್ದು ಇದನ್ನು ಔಷಧಿಯಾಗಿ ಬಳಸುತ್ತಾರೆ. ನುಗ್ಗೆಕಾಯಿಯು ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಇದರಲ್ಲಿ ಹೆಚ್ಚಿನ ನಾರಿನಂಶ ಇರುವ ಕಾರಣ ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವುದರಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ.
ನುಗ್ಗೆಕಾಯಿ ಸಂಧಿವಾತವನ್ನು ದೂರವಿಟ್ಟು ಮೂಳೆಗಳನ್ನು ಬಲಪಡಿಸು ತ್ತದೆ. ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವು ಅತಿ ಮುಖ್ಯವಾಗಿ ಬೇಕಾಗಿರುವುದು. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಮೂಳೆಗಳ ಆರೋಗ್ಯವು ಉತ್ತಮವಾಗುತ್ತದೆ. ನುಗ್ಗೇಕಾಯಿಯಂತೆ, ನುಗ್ಗೆ ಸೊಪ್ಪಿನಲ್ಲಿಯೂ ಹಲವಾರು ಅಗತ್ಯ ಪೋಷಕಾಂಶಗಳೂ ಲಭ್ಯವಿದ್ದು ಮುಖ್ಯವಾಗಿ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುವಲ್ಲಿ ಹಾಗೂ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ. ವರ್ಷಪೂರ್ತಿ ಹೇರಳವಾಗಿ ದೊರೆಯುವ ನುಗ್ಗೆ ಸೊಪ್ಪಿನಲ್ಲಿ ಮಧುಮೇಹ ನಿವಾರಕ ಗುಣಗಳಿವೆ. ಇದು ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಪ್ರಚೋದನೆ ನೀಡುತ್ತದೆ.
ಇವು ಮಧುಮೇಹಿಗಳ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿರುವ ಸಕ್ಕರೆಗೆ ವಿರುದ್ಧವಾಗಿ ಕೆಲಸ ಮಾಡುತ್ತವೆ. ಪರಿಣಾಮವಾಗಿ ರಕ್ತ ಸಕ್ಕರೆಯನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚಿಸುತ್ತದೆ ಹಾಗೂ ರಕ್ತದಲ್ಲಿ ಥಟ್ಟನೇ ಅಧಿಕ ಪ್ರಮಾಣದ ರಕ್ತ ನುಗ್ಗದಿರುವಂತೆ ನೋಡಿಕೊಳ್ಳುತ್ತದೆ.
ಎಲ್ಲಾ ಕಾಲದಲ್ಲಿಯೂ ನಿರಂತರವಾಗಿ ದೊರೆಯುವ ನುಗ್ಗೆಸೊಪ್ಪು ಹಲವಾರು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಇದರ ನಿಯಮಿತವಾದ ಬಳಕೆಯಿಂದ ರಕ್ತ ಶುದ್ಧಿಯಾಗುವುದರೊಂದಿಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗಿ ದೌರ್ಬಲ್ಯ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮೆದುಳಿನ ಜೀವಕೋಶದ ಸವೆತವನ್ನು ತಡೆದು ನೆನಪಿನ ಶಕ್ತಿಯನ್ನು ಹೆಚ್ಚಿಸಿ ಮರೆಗುಳಿಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ.
ನುಗ್ಗೆಸೊಪ್ಪನ್ನು ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ ಹಾಗೂ ಚಪಾತಿ ಹಿಟ್ಟಿನ ಜೊತೆಗೆ ಕಲೆಸಿ ಲಟ್ಟಿಸಿ ಪರೋಟಾ ಅಥವಾ ಚಪಾತಿಯ ರೂಪದಲ್ಲಿಯೂ ಸೇವಿಸಬಹುದು. ಈ ರೀತಿ ಮಾಡುವುದರಿಂದ ದೇಹ ಬೇಕಾದ ಉಷ್ಣಾಂಶ ಹಾಗೂ ಪೋಷಕಾಂಶಗಳನ್ನು ಸುಲಭವಾಗಿ ಪಡೆಯಬಹುದು. ಇದು ಉಷ್ಣಾಂಶದ ಗುಣವನ್ನು ಹೊಂದಿರುವ ಕಾರಣ ಜ್ವರದ ವಿರುದ್ಧ ಹೋರಾಡಲು ನೆರವಾಗಬಲ್ಲದು. ಶೀತ, ಜ್ವರ, ಗಂಟಲು ನೋವಿನ ಸಮಸ್ಯೆಯೂ ನಿವಾರಣೆ ಆಗುವುದು. ಅಲ್ಲದೇ ನೈಟ್ರಿಕ್ ಆಮ್ಲದ ಪ್ರಮಾಣದಲ್ಲಿ ಗಣನೀಯವಾದ ಇಳಿಕೆ ಮತ್ತು ರಕ್ತದ ನೀರಿನಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಗೊಳಿಸಿ ಇನ್ಸುಲಿನ್ ಮತ್ತು ಪೆÇ್ರೀಟೀನುಗಳನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತದೆ.
ನುಗ್ಗೆಸೊಪ್ಪಿನಲ್ಲಿರುವ ಪೋಷಕಾಂಶಗಳು ಈ ಸಂಗ್ರಹವನ್ನು ಸಡಿಲಗೊಳಿಸಿ ಪ್ರತಿ ಕಣಗಳು ಬಿಡಿಬಿಡಿಯಾಗುವಂತೆ ಮಾಡುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ನ ಪ್ರಮಾಣ ಕಡಿಮೆ ಮಾಡುತ್ತವೆ. ಇದರಿಂದ ರಕ್ತದಲ್ಲಿ ಒಟ್ಟು ಕೊಲೆಸ್ಟ್ರಾಲ್ ಮತ್ತು ಟ್ರೈಸ್ಗ್ಲಿಸರೈಡ್ ಮಟ್ಟ ಕಡಿಮೆಯಾಗುತ್ತದೆ ಮತ್ತು ಕರುಳಿನ ಮೂಲಕ ಇನ್ನಷ್ಟು ಕೊಲೆಸ್ಟ್ರಾಲ್ ಹೀರುವುದನ್ನೂ ತಡೆಯುತ್ತದೆ.
ಅತೀ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಎ, ಮೆಗ್ನೀಶಿಯಂ, ಪ್ರೊಟೀನನ್ನು ಹೊಂದಿರುವುದರಿಂದ, ಹಾಲುಣಿಸುವ ತಾಯಂದಿರಿಗೆ ಅತ್ಯಂತ ಪೌಷ್ಠಿಕ ಆಹಾರವಾಗಿ, ಹೆಚ್ಚು ಉಪಯುಕ್ತವಾಗಿದೆ. ಬಂಜೆತನ ನಿವಾರಣೆ ಮಾಡುವಲ್ಲಿ ನುಗ್ಗೆಕಾಯಿ ಮಹತ್ವದ ಪಾತ್ರವಹಿಸುತ್ತದೆ. ಸೋಂಕು, ಮಲಬದ್ಧತೆ, ಸಂಧಿವಾತ, ಕಫ, ಜೀಣಾರ್ಂಗಗಳ ತೊಂದರೆ, ಮೂತ್ರಕೋಶ ತೊಂದರೆ, ಲೈಂಗಿಕ ಸಮಸ್ಯೆ....ಇತ್ಯಾದಿಗಳಲ್ಲಿ ಇದನ್ನು ಬಳಸುತ್ತಾರೆ. ಸೌಂದರ್ಯ ವರ್ಧಕಗಳಲ್ಲಿಯೂ ನುಗ್ಗೆ ಸೊಪ್ಪನ್ನು ಬಳಸುವುದುಂಟು. ನುಗ್ಗೆ ಕಾಯಿಯನ್ನು ಇಷ್ಟ ಪಡುವ ಅನೇಕರು, ನುಗ್ಗೆ ಸೊಪ್ಪು ಒಗರು, ಕಹಿ...ಎಂದು ಮೂಗು ಮುರಿಯುತ್ತಾರೆ. ಆದರೆ, ಒಮ್ಮೆ ಅದರ ಖಾದ್ಯವನ್ನು ಮಾಡಿ ಸೇವಿಸಿ. ಆಗ ತಿಳಿಯುವುದು ನುಗ್ಗೆ ಸೊಪ್ಪುನ ಮಹಿಮೆ.
(ಸಂಗ್ರಹ) ಶರ್ಮಿಳಾ ರಮೇಶ್,
ಸೋಮವಾರಪೇಟೆ.