ಚೆಟ್ಟಳ್ಳಿ, ಸೆ. 14: ನಾಪೆÇೀಕ್ಲುವಿನ ರಾಫೆಲ್ಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರಿಗೆ ತಾ. 15 ರಂದು (ಇಂದು) ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಮಡಿಕೇರಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ, ನಾಪೆÇೀಕ್ಲು ಆಸ್ಪತ್ರೆಯ ಆಡಳಿತಾಧಿಕಾರಿ ಮೂಳೆತಜ್ಞ ಡಾ ರೋಹನ್ ಪೂವಯ್ಯ ಹಾಗೂ ನಾಪೆÇೀಕ್ಲು ಠಾಣಾಧಿಕಾರಿ ಕಿರಣ್ ಆರ್. ಇತರರು ಪಾಲ್ಗೊಳ್ಳಲಿದ್ದಾರೆ.