ಇಂತಹ ಪರಿಸ್ಥಿತಿಯಲ್ಲಿ ಪಾರದರ್ಶಕ ಆಡಳಿತದೊಂದಿಗೆ ಸಾರ್ವಜನಿಕ ಕುಂದು ಕೊರತೆ ಪರಿಹಾರಕ್ಕಾಗಿ ಕೊಡಗು ಸೇವಾ ಕೇಂದ್ರ ಹಲವು ಸಲಹೆಗಳನ್ನು ಮುಂದಿರಿಸಿದೆ. ಕಂದಾಯ ನಿಗದಿ ಆನ್ಲೈನ್ ಅರ್ಜಿ ಮತ್ತು ಸಕಾಲ ಯೋಜನೆ ವ್ಯಾಪ್ತಿಗೆ ಸೇರಿಸಬೇಕು, ಪ್ರತಿ ತಿಂಗಳಿಗೆ ಒಮ್ಮೆ ಕಂದಾಯ ನಿಗದಿ, ಪೌತಿ ಖಾತೆ, ದುರಸ್ತಿ ಕಡತಗಳ ಅದಾಲತ್ ನಡೆಸಬೇಕು, ವಿಲೇವಾರಿಯಾಗದ ಕಡತಗಳ ಬಗ್ಗೆ ಕಿರಿಯ ಅಧಿಕಾರಿಗಳು ನೀಡುವ ತಪ್ಪು ಮಾಹಿತಿಯನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು,ರಜೆ ಹಾಕದೆ ಸಿಬ್ಬಂದಿಗಳು ಕಚೇರಿಯಲ್ಲಿ ಇಲ್ಲದೆ ಇರುವ ಬಗ್ಗೆ ಪರಿಶೀಲನೆ ನಡೆಸಬೇಕು, ಅಪಾರ ಜಿಲ್ಲಾಧಿಕಾರಿ ಅವರು ಪ್ರತಿ ತಾಲೂಕು ಕಚೇರಿಗೆ ಕನಿಷ್ಟ 3 ತಿಂಗಳಿಗೆ ಒಮ್ಮೆಯಾದರೂ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಬೇಕು.

ಕಡತಗಳ ಹಿರಿತನದ ಆಧಾರದಲ್ಲಿ ವಿಲೇವಾರಿ ಮಾಡಬೇಕು, ಪ್ರತಿ ಅರ್ಜಿಗೆ ಆಯಾ ಪೂರಕ ದಾಖಲೆಗಳನ್ನು ಲಗತ್ತಿಸಬೇಕು ಎಂಬುದನ್ನು ಪಟ್ಟಿ ತಯಾರಿಸಿ ಸಾರ್ವಜನಿಕ ತಿಳುವಳಿಕೆಗಾಗಿ ಕಚೇರಿಯ ಸೂಚನಾ ಫಲಕದಲ್ಲಿ ಹಾಕಬೇಕು, ಜಿಲ್ಲೆಯ ಎಲ್ಲಾ

(ಮೊದಲ ಪುಟದಿಂದ) ತಹಶೀಲ್ದಾರ್ ಕಚೇರಿಯಲ್ಲಿ ಏಕರೂಪದ ನಿಯಮ ಜಾರಿಗೊಳಿಸಬೇಕು. ಯಾವ ಸಿಬ್ಬಂದಿಯ ಬಳಿ ಎಷ್ಟು ಕಡತಗಳು ಬಾಕಿ ಇವೆ ಮತ್ತು ಎಷ್ಟು ವಿಲೇವಾರಿ ಆಗಿದೆ ಎಂಬುದನ್ನು ತಿಂಗಳಿಗೆ ಒಮ್ಮೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿ ಸಾರ್ವಜನಿಕ ಕೆಲಸ ಕಾರ್ಯಗಳ ಪಾರದರ್ಶಕ ಆಳ್ವಿಕೆಗೆ ಒತ್ತು ನೀಡಬೇಕು ಎಂದು ನೊಂದ ಜನತೆಯ ಪರವಾಗಿ ಸೇವಾ ಕೇಂದ್ರ ಆಗ್ರಹಪಡಿಸಿದೆ.