ಓರ್ವನ ಬಂಧನ - ಬಿಡುಗಡೆ
ಶನಿವಾರಸಂತೆ, ಸೆ. 13: ಆಲೂರು ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮದ ಹಾಲಿನ ಡೈರಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮೂರ್ನಾಲ್ಕು ಮಂದಿ ಮದ್ಯಪಾನ ಮಾಡುತ್ತಿದ್ದಾಗ ಪೊಲೀಸರು ಧಾಳಿ ಮಾಡಿದ್ದು, ಸ್ಥಳದಲ್ಲಿದ್ದ ಆರೋಪಿ ಗಂಗಾವರ ಗ್ರಾಮದ ಜಿ.ಆರ್. ಷಣ್ಮುಖ ಎಂಬಾತನನ್ನು ಬಂಧಿಸಿದ್ದಾರೆ ಉಳಿದವರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಜಾಮೀನಿನಡಿ ಬಿಡುಗಡೆ ಮಾಡಲಾಗಿದೆ.