ಮಡಿಕೇರಿ, ಸೆ. 13: ಮಡಿಕೇರಿಯ ವಿಜಯವಿನಾಯಕ ದೇವಾಲಯದಿಂದ ಕಾಲೇಜಿಗೆ ತೆರಳುವ ದಾರಿಯಲ್ಲಿನ ಪೈಸಾರಿ ಜಾಗವನ್ನು ಅತಿಕ್ರಮಿಸಿಕೊಳ್ಳಲಾಗಿದೆ. ಅನಧಿಕೃತವಾಗಿ ಅಲ್ಲಿದ್ದ ಮರವನ್ನು ಕಡಿದು ಜಾಗದ ಸುತ್ತ ಬೇಲಿಯನ್ನು ಹಾಕಲಾಗಿದೆ. ಸರಕಾರಕ್ಕೆ ಸೇರಿರುವ ಈ ಜಾಗವನ್ನು ಸಮತಟ್ಟು ಕೂಡ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಬರೆ ಕುಸಿದು ಕೆಳಗಿನ ರಸ್ತೆ ಕೂಡ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ಪಕ್ಕದಲ್ಲೆ ಹಲವು ಮನೆಗಳಿದ್ದು ಇಲ್ಲಿಯ ನಿವಾಸಿಗಳಿಗೂ ತೊಂದರೆ ಉಂಟಾಗಲಿದೆ. ಸರಕಾರಕ್ಕೆ ಸೇರಿದ ಈ ಜಾಗದ ಮೌಲ್ಯ ಕನಿಷ್ಟ 50 ಲಕ್ಷ ರೂಪಾಯಿ ಇದೆ ಎಂದು ಈ ಭಾಗದ ನಾಗರಿಕರು ಗಮನ ಸೆಳೆದಿದ್ದು, ಅತಿಕ್ರಮಣ ವಿರುದ್ಧ ನಗರಸಭೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಪ್ರತಿಭಟನೆಯನ್ನು ನಗರಸಭೆ ವಿರುದ್ಧ ರೂಪಿಸುವುದಾಗಿ ಸುಳಿವು ನೀಡಿದ್ದಾರೆ.