ಸೋಮವಾರಪೇಟೆ, ಸೆ.13: ಪಟ್ಟಣದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಮಾರುತಿ ಕಾರು, ಯಡವನಾಡು ಅರಣ್ಯ ಪ್ರದೇಶದ ರಾಜ್ಯ ಹೆದ್ದಾರಿಯಲ್ಲಿ ಅವಘಡಕ್ಕೀಡಾದ ಘಟನೆ ಇಂದು ಸಂಜೆ ನಡೆದಿದೆ.

ಯಡವನಾಡು ಮೀಸಲು ಅರಣ್ಯ ಪ್ರದೇಶದ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಬಸವಣ್ಣ ಕಲ್ಲಿನ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರು, ದೇವಾಲಯದ ಸಮೀಪ ಪಲ್ಟಿಯಾಗಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಮಂದಿ ಯಾವುದೇ ಪ್ರಾಣಾಪಾಯ ವಿಲ್ಲದೇ ಪಾರಾಗಿದ್ದಾರೆ. ಅವಘಡಕ್ಕೀಡಾದ ಕಾರು ಭಾಗಶಃ ಜಖಂಗೊಂಡಿದ್ದು, ಸ್ಥಳಕ್ಕೆ ಸೋಮವಾರಪೇಟೆ ಠಾಣಾಧಿಕಾರಿ ಶಿವಶಂಕರ್ ಸೇರಿದಂತೆ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.