ಮಡಿಕೇರಿ, ಸೆ. 13: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 27 ಕ್ಕೆ ಏರಿದೆ. ಕೊಂಡಂಗೇರಿ ಗ್ರಾಮದ ನಿವಾಸಿ 61 ವರ್ಷದ ಪುರುಷರೊಬ್ಬರು, ಈ ಹಿಂದಿನಿಂದಲೂ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಜ್ವರ ಸಂಬಂಧ ಮೂರ್ನಾಡುವಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ತಾ. 13 ರಂದು ಬೆಳಗ್ಗಿನ ಜಾವ 5.30 ಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕರೆ ತಂದಿದ್ದು, ತಕ್ಷಣವೇ ಅವರನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಿದ್ದು, ಮೃತರಾಗಿರುವುದು ದೃಢಪಟ್ಟಿದೆ. ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದ್ದರಿಂದ ಕೊರೊನಾ ಸಾವು ಎಂದೇ ಪರಿಗಣಿಸಲಾಗಿದೆ.

ಜಿಲ್ಲೆಯಲ್ಲಿ 37 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 1994 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1640 ಮಂದಿ ಗುಣಮುಖರಾಗಿದ್ದಾರೆ. 327 ಸಕ್ರಿಯ ಪ್ರಕರಣಗಳಿದ್ದು, 27 ಮರಣ ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 83 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 68 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 176 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 347 ನಿಯಂತ್ರಿತ ವಲಯಗಳಿವೆ. ಹೊಸ ಪ್ರಕರಣಗಳ ವಿವರ ವೀರಾಜಪೇಟೆ ವಿಜಯನಗರದ 47 ವರ್ಷದ ಪುರುಷ, ಪಾಲಿಬೆಟ್ಟದ ಜಿಎಂಪಿ ಶಾಲೆ ಹಾಸ್ಟೆಲ್ ಸಮೀಪದ 46 ವರ್ಷದ ಪುರುಷ, ವೀರಾಜಪೇಟೆ ಸುಂಕದಕಟ್ಟೆಯ 38 ವರ್ಷದ ಮಹಿಳೆ, ನೆಲ್ಲಿಹುದಿಕೇರಿ ಪಬ್ಲಿಕ್ ಶಾಲೆ ಸಮೀಪದ 42 ವರ್ಷದ ಮಹಿಳೆ, ಸಿದ್ದಾಪುರದ ಗುಹ್ಯ ಗ್ರಾಮದ ಬಿಜಿಎಸ್ ಶಾಲೆ ಸಮೀಪದ 43 ವರ್ಷದ ಪುರುಷ, ನಂಜರಾಯಪಟ್ಟಣ ಹೊಸಪಟ್ಟಣ ಗ್ರಾಮದ 33 ವರ್ಷದ ಮಹಿಳೆ, ನೆಲ್ಲುಹುದಿಕೇರಿ ಕಾಪೆರ್Çರೇಶನ್ ಬ್ಯಾಂಕ್ ಸಮೀಪದ 50 ವರ್ಷದ ಮಹಿಳೆ, ಸೋಮವಾರಪೇಟೆ ಜೂನಿಯರ್ ಕಾಲೇಜು ಸಮೀಪದ 40 ವರ್ಷದ ಮಹಿಳೆ, ಕುಶಾಲನಗರ ಬೈಚನಹಳ್ಳಿಯ ಮಸೀದಿ ಸಮೀಪದ 23 ವರ್ಷದ ಪುರುಷ, ಕುಶಾಲನಗರ ಬೈಪಾಸ್ ರಸ್ತೆಯ 26 ವರ್ಷದ ಪುರುಷ, ಬೆಟ್ಟಗೇರಿ ಪಾಲೂರಿನ 47 ವರ್ಷದ ಮಹಿಳೆ, ಸೋಮವಾರಪೇಟೆ ಗರ್ವಾಲೆಯ ಅಂಗನವಾಡಿ ಸಮೀಪದ 19 ವರ್ಷದ ಮಹಿಳೆ, ಮೇಕೇರಿಯ ಬಿಳಿಗಿರಿ ಜಂಕ್ಷನ್ನಿನ 17 ವರ್ಷದ ಪುರುಷ, ಶಿರಂಗಾಲದ ಮುಳ್ಳುಕೊಪ್ಪಲುವಿನ 47 ವರ್ಷದ ಮಹಿಳೆ, ಗೋಣಿಕೊಪ್ಪದ 1ನೇ ಬ್ಲಾಕಿನ ವಾಟರ್ ಟ್ಯಾಂಕ್ ಸಮೀಪದ 63 ವರ್ಷದ ಮಹಿಳೆ,

ವೀರಾಜಪೇಟೆ ಕೊಂಡಂಗೇರಿಯ 61 ವರ್ಷದ ಪುರುಷ(ಮೃತಪಟ್ಟ ಪ್ರಕರಣ), ಬೊಯಿಕೇರಿಯ 34,39 ವರ್ಷದ ಪುರುಷರು ಮತ್ತು 10 ವರ್ಷದ ಬಾಲಕ, ಪೆÇನ್ನಂಪೇಟೆಯ ಕೃಷ್ಣ ನಗರದ 53 ವರ್ಷದ ಪುರುಷ, ವೀರಾಜಪೇಟೆ ವಿನಾಯಕ ನಗರ ಗಣಪತಿ ದೇವಾಲಯ ಸಮೀಪದ 19 ವರ್ಷದ ಪುರುಷ, ವೀರಾಜಪೇಟೆ ಅರಮೇರಿ ಗ್ರಾಮ ಮತ್ತು ಅಂಚೆಯ 29 ವರ್ಷದ ಪುರುಷ, ಭಾಗಮಂಡಲ ಕೋರಂಗಾಲ ಜಂಕ್ಷನ್ನಿನ 54 ವರ್ಷದ ಪುರುಷ, ಭಾಗಮಂಡಲ ಪೆÇಲೀಸ್ ವಸತಿಗೃಹದ 33 ವರ್ಷದ ಪುರುಷ, ಮಡಿಕೇರಿ ಕಾವೇರಿ ಲೇಔಟಿನ 31 ವರ್ಷದ ಪುರುಷ, ಮೈಸೂರು ಕೆ.ಆರ್ ನಗರದ ಹೆಬ್ಸೂರುವಿನ 32 ವರ್ಷದ ಪುರುಷ, ಮಡಿಕೇರಿ ಡೈರಿ ಫಾರಂನ ಅಂಗನವಾಡಿ ಸಮೀಪದ 32 ವರ್ಷದ ಮಹಿಳೆ, ತಾಳತ್‍ಮನೆಯ ಗ್ರೀನ್ ಲೈನ್ ಹೋಂಸ್ಟೇ ಸಮೀಪದ 56 ವರ್ಷದ ಪುರುಷ, ಮೈಸೂರಿನ 31 ವರ್ಷದ ಪುರುಷ, ಕೊಡ್ಲಿಪೇಟೆ ಚೌಡೇಶ್ವರಿ ದೇವಾಲಯ ಹಿಂಭಾಗದ 37 ವರ್ಷದ ಮಹಿಳೆ, 59 ವರ್ಷದ ಪುರುಷ, 60 ಮತ್ತು 51 ವರ್ಷದ ಮಹಿಳೆಯರು, ಎನ್.ಎಂ ರಸ್ತೆಯ 49 ವರ್ಷದ ಪುರುಷ, ಕುಶಾಲನಗರ ಬಸವೇಶ್ವರ ಬಡಾವಣೆಯ ಗೋಪಾಸ್ಲ್ ವೃತ್ತದ 36 ವರ್ಷದ ಮಹಿಳೆ ಮತ್ತು 5 ವರ್ಷದ ಬಾಲಕಿ, ಕುಶಾಲನಗರ ಗೌಡ ಸಮಾಜ ಸಮೀಪದ ಶಿವರಾಮ ಕಾರಂತ್ ಲೇಔಟಿನ 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.