ಮಡಿಕೇರಿ, ಸೆ. 12: ಕುಂಜಿಲ ಗ್ರಾಮದ ನಿವಾಸಿ ಎಂ.ಯು. ಅಬ್ದುಲ್ ಗಫೂರ್ ಅವರ ಲೈನ್‍ಮನೆಯಲ್ಲಿ ವಾಸವಿದ್ದ ಮೀನಾ ಛೇತ್ರಿ (36) ಅವರು ನಾಪತ್ತೆಯಾಗಿದ್ದಾರೆ. ಮೀನಾ ಅವರು ತಾ. 8 ರಂದು ನಾಪೋಕ್ಲು ಆಸ್ಪತ್ರೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಮನೆಗೆ ಹಿಂತಿರುಗಲಿಲ್ಲ ಎಂದು ಆಕೆಯ ಪತಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರ ಬಗ್ಗೆ ಕುರುಹು ಲಭಿಸಿದಲ್ಲಿ ನಾಪೋಕ್ಲು ಪೊಲೀಸ್ ಠಾಣೆ ದೂ. 08272-237240 ಅನ್ನು ಸಂಪರ್ಕಿಸಲು ಕೋರಿದೆ.