ಮಡಿಕೇರಿ, ಸೆ. 12: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್‍ನಲ್ಲಿ ತಾವು ಠೇವಣಿ ಇರಿಸಿರುವ ಹಣವನ್ನು ಹಿಂತಿರುಗಿಸಿಕೊಡುವಂತೆ, ಪೂಮಾಲೆ ಸಾಪ್ತಾಹಿಕ ಸಂಪಾದಕ ಎ.ಸಿ. ಮಹೇಶ್ ನಾಚಯ್ಯ ಹಾಗೂ ಅವರ ಪತ್ನಿ ಪ್ರಮಿಳಾ ನಾಚಯ್ಯ ವೀರಾಜಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ತಾವು ಸೇರಿದಂತೆ ಅನೇಕ ಗ್ರಾಹಕರಿಗೆ ಬ್ಯಾಂಕ್ ಆಡಳಿತ ಮಂಡಳಿಯಿಂದ ವಂಚನೆಯಾಗುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರುಗಳು ಗಮನ ಸೆಳೆದಿದ್ದಾರೆ. ಬ್ಯಾಂಕ್ ಹಗರಣದ ಕುರಿತು ‘ಶಕ್ತಿ’ ಬಹಿರಂಗಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.