ಮಡಿಕೇರಿ, ಸೆ. 12: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣ ಮಾಂದಲಪಟ್ಟಿ ಪ್ರವೇಶ ದ್ವಾರದಲ್ಲಿ ಅರಣ್ಯ ಇಲಾಖೆಯಿಂದ ಶೆಡ್ ನಿರ್ಮಾಣದೊಂದಿಗೆ ಗ್ರಾಮಸ್ಥರ ದನಗಳ ಮೇವಿಗೆ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿರುವ ಅಲ್ಲಿನ ನಿವಾಸಿಗಳಾದ ಟಿ.ಪಿ. ಮಾದಪ್ಪ, ಟಿ.ಪಿ. ಗಣೇಶ್ ಹಾಗೂ ಇತರರು ಗ್ರಾಮೀಣ ಜನತೆಯ ದನಗಳಿಗೆ ಮೇಯಲು ತೊಂದರೆ ಕೊಡದಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಲು ಕೋರಿದ್ದಾರೆ.