ಕಣಿವೆ, ಸೆ. 12: ಇಲ್ಲಿಗೆ ಸಮೀಪದ ಹೆಬ್ಬಾಲೆ ಮುಖ್ಯ ರಸ್ತೆಯಂಚಿನಲ್ಲಿ ವಿವಿಧ ಕಂಪೆನಿಗಳ ಎರಡು ಪ್ರತ್ಯೇಕ ಮೊಬೈಲ್ ನೆಟ್‍ವರ್ಕ್ ಸೆಳೆವ ಟವರ್‍ಗಳಿವೆ. ಆ ಎರಡರಲ್ಲೊಂದು ಹಸಿರು ಬಳ್ಳಿ ಆವೃತಗೊಂಡ ಟವರ್ ಇದೆ. ಅದು ನೋಡುಗರಿಗೆ ಹಸಿರು ಟವರ್‍ನಂತೆ ಭಾಸವಾಗುತ್ತದೆ. ಅಂದರೆ ಟವರ್ ಬಳಿಯಿದ್ದ ಕಾಡು ಬಳ್ಳಿಯೊಂದು ಟವರನ್ನು ಅಪ್ಪಿ ಸುಮಾರು ಇನ್ನೂರೈವತ್ತು ಅಡಿಗಳಿಗೂ ಹೆಚ್ಚಿನ ಎತ್ತರಕ್ಕೆ ಬೆಳೆದಿದೆ. ಬೆಳೆಯುತ್ತಲೇ ಇದೆ. ಹೀಗೆ ಅಷ್ಟೊಂದು ಎತ್ತರಕ್ಕೆ ಬೆಳೆಯುತ್ತಿರುವ ಈ ಬಳ್ಳಿಗೆ ಗೊಬ್ಬರ ಹಾಕಿದವರಾರು? ಇನ್ನು ಆ ಬಳ್ಳಿ ಬೆಳೆದಿರುವ ಮಣ್ಣಿನ ಸಾರ ಇನ್ನೆಷ್ಟು ಫಲವತ್ತತೆಯಿಂದ ಕೂಡಿರಬಹುದು...!