ವೀರಾಜಪೇಟೆ, ಸೆ. 10: ಎಸ್.ಎಸ್.ಎಲ್.ಸಿ. ಮರು ಮೌಲ್ಯಮಾಪನದಲ್ಲಿ 598 ಅಂಕ ಪಡೆದ ವೀರಾಜಪೇಟೆ ಸಂತ ಅನ್ನಮ್ಮ ಪ್ರೌಢಶಾಲಾ ವಿದ್ಯಾರ್ಥಿ ಪಿ.ಎಸ್. ಸಬಿನ್‍ಗೆ ಈ ಹಿಂದೆ ಪ್ರಕಟಗೊಂಡ ಅಂಕಪಟ್ಟಿಯಲ್ಲಿ 591 ಇತ್ತು. ಇದೀಗ ಮರು ಮೌಲ್ಯಮಾಪನದಿಂದಾಗಿ ಈತನ ಅಂಕಗಳು 598 ಆಗಿದೆ. ಕನ್ನಡ ಪ್ರಥಮ ಬಾಷೆಯಲ್ಲಿ ಈತ 125ಕ್ಕೆ 123 ಅಂಕ ಪಡೆದುಕೊಂಡಿದ್ದಾನೆ.