ಮಡಿಕೇರಿ, ಸೆ. 10: ಬಿದ್ದಿರುವ ಮರಗಳನ್ನು ಕೊಡಗಿನಿಂದ ಸಾಗಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಒತ್ತಾಯಿಸಿದ್ದಾರೆ.
ಕೋವಿಡ್ ಮಾರ್ಗಸೂಚಿ ಮತ್ತು ಅತಿಯಾದ ಮಳೆಯ ಕಾರಣ ಕೊಡಗಿನಲ್ಲಿ ಮರಗಳ ಸಾಗಾಟಕ್ಕೆ ಕಳೆದ ಐದು ತಿಂಗಳುಗಳಿಂದ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಟಿಂಬರ್ ಕ್ಷೇತ್ರವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಮರಗೆಲಸದವರು ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಡ ಕಾರ್ಮಿಕರು, ಲಾರಿ ಸಿಬ್ಬಂದಿಗಳು ಮತ್ತು ಬೆಳೆಗಾರರ ಹಿತ ಕಾಯಲು ತಕ್ಷಣ ಮರ ಸಾಗಾಟಕ್ಕೆ ಅನುಮತಿ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆÉ.