ನಾಪೆÇೀಕ್ಲು, ಸೆ. 10: ಈ ವರ್ಷ ಕೊರೊನಾ ಭೀತಿ ಲಾಕ್‍ಡೌನ್‍ನಿಂದ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಪ್ರಮಾಣದಲ್ಲಿ ಇದ್ದರೂ ಇಲ್ಲಿನ ರಸ್ತೆಗಳು ಮಾತ್ರ ತೀರಾ ದುಸ್ಥಿತಿ ತಲಪಿವೆ. ರಸ್ತೆಗಳು ಗುಂಡಿಗಳಿಂದ ತುಂಬಿ ವಾಹನಗಳು ಫುಟ್‍ಪಾತ್ ಮೂಲಕ ಸಂಚಾರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿಯಿಂದ ಉಡೋತ್‍ಮೊಟ್ಟೆ ರಸ್ತೆಯ ಸ್ಥಿತಿ ಹೇಳತೀರದು. ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿದ್ದು, ವಾಹನ ಸವಾರರಿಗೆ ಸವಾಲಿನ ಸಂಚಾರವಾಗಿದೆ. ಕೆÀರೆಯಂತಹ ಗುಂಡಿಗಳು ನಿರ್ಮಾಣವಾಗಿದ್ದು, ಈ ಗುಂಡಿಯಲ್ಲಿ ಈಗಾಗಲೇ ಬೈಕ್ ಸವಾರರು ತಮ್ಮ ಕಾಲುಗಳನ್ನು ಮುರಿದು ಕೊಂಡಿದ್ದಾರೆ. ಲೋಕೋಪಯೊಗಿ ಇಲಾಖೆ ಮಾತ್ರ ಗುಂಡಿಯನ್ನು ನೋಡಿಯೂ ಕಾಣದಂತೆ ಇದೆ ಎಂದು ಗ್ರಾಮಸ್ಥರು, ವಾಹನ ಮಾಲೀಕರು ಆರೋಪಿಸಿದ್ದಾರೆ.

- ದುಗ್ಗಳ.