ಕೂಡಿಗೆ, ಸೆ. 11: ಕೂಡಿಗೆ ಗ್ರಾ. ಪಂ.ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರಕ್ಕೆ ತೆರಳುವ ಮುಖ್ಯ ರಸ್ತೆಯು ತೀರಾ ಹಾಳಾಗಿದ್ದು ತಿರುಗಾಡಲು ಸಾಧ್ಯವಾಗದಷ್ಟು ಕೆಸರುಮಯವಾಗಿದೆ ಈ ರಸ್ತೆ ಮಣ್ಣಿನ ರಸ್ತೆಯಾಗಿದ್ದು ಅನೇಕ ವಾಹನಗಳು ಓಡಾತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅನೇಕ ಗುಂಡಿ ಬಿದ್ದ ಪರಿಣಾಮ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯು ಕೆಸರು ಮಯವಾಗಿರುವ ದರಿಂದ ತೊಂದರೆ ಆಗುತ್ತಿದೆ; ಸಂಬಂಧಿಸಿದ ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ರಸ್ತೆ ಕಾಮಗಾರಿ ಕೈಗೊಳ್ಳುವಂತೆ ಪುನರ್ವಸತಿ ಕೇಂದ್ರದ ಪ್ರಮುಖರಾದ ಅಪ್ಪು, ಮುತ್ತ, ಶಂಕರ್ ಸೇರಿದಂತೆ ಹಾಡಿ ನಿವಾಸಿಗಳು ಒತ್ತಾಯಿಸಿದ್ದಾರೆ.