ಸುಂಟಿಕೊಪ್ಪ, ಸೆ. 10: ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ 5.38 ಕೋಟಿ ವೆಚ್ಚದಲ್ಲಿ ಅಂದಗೋವೆ_ ಚಿಕ್ಲಿಹೊಳೆಗೆ ತೆರಳುವ 6.38 ಕಿ.ಮೀ ರಸ್ತೆಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಈ ರಸ್ತೆಯು ಅತ್ಯಂತ ಗುಣಮಟ್ಟದಿಂದ ಕೂಡಿದ್ದು, ಯಾವುದೇ ದೂರುಗಳು ಬಾರದಂತೆ ಉತ್ತಮ ಗುಣಮಟ್ಟದ ರಸ್ತೆಯನ್ನು ನಿರ್ಮಿಸಲಾಗುವುದು. ಅನುದಾನ ಬಿಡುಗಡೆಗೊಳ್ಳಲು ಶಾಸಕ ಅಪ್ಪಚ್ಚು ರಂಜನ್ ಅವರ ಶ್ರಮ ಬಹಳವಾಗಿತ್ತು ಎಂದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈ ರಸ್ತೆ ಅಭಿವೃದ್ಧಿ ಯಿಂದ ಅಂದಗೋವೆ, ಮೆಟ್ನಳ್ಳ, ಕಂಬಿಬಾಣೆ,ಚಿಕ್ಲಿಹೊಳೆ ಮಾರ್ಗವಾಗಿ ಸಿದ್ದಾಪುರಕ್ಕೆ ತೆರಳಲು ಅತಿ ಹತ್ತಿರದ ದಾರಿಯಾಗಲಿದೆ. ರಸ್ತೆ ಕಾಮಗಾರಿ ಸಂದರ್ಭ ಗುತ್ತಿಗೆದಾರರೊಂದಿಗೆ ಕೈಜೋಡಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುಲ್ಲೂರಿಕೊಪ್ಪ ಮಾದಪ್ಪ, ಸೋಮವಾರಪೇಟೆ ತಾಲೂಕು ಅಕ್ರಮ - ಸಕ್ರಮ ಸದಸ್ಯ ಡಾ.ಶಶಿಕಾಂತ್ ರೈ, ಕೊಡಗು ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಮುಖಂಡರಾದ ದಾಸಂಡ ರಮೇಶ್, ಕ್ಲೈವಾ ಪೊನ್ನಪ್ಪ, ವಿಜು ಚಂಗಪ್ಪ ಇತರರು ಇದ್ದರು.