ಮಡಿಕೇರಿ, ಸೆ. 11: ಇಲ್ಲಿನ ಜಿಲ್ಲಾ ವೈದ್ಯಕೀಯ ಆಸ್ಪತ್ರೆಯ ಕ್ಷ-ಕಿರಣ (ಎಕ್ಸರೆ) ವಿಭಾಗದ ಸಿಬ್ಬಂದಿ ರಕ್ಷಿತ್ ಎಂಬಾತ, ಇನ್ನೋರ್ವ ಸಿಬ್ಬಂದಿ ಸತೀಶ್ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪರಸ್ಪರ ದ್ವೇಷ ಸಾಧನೆಯಿಂದ ಈ ಘಟನೆ ಸಂಭವಿಸಿದೆ. ಹಲ್ಲೆಗೊಳಗಾಗಿರುವ ಗಾಯಾಳು ನೀಡಿದ ಪುಕಾರು ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕಾಯ್ದೆ 307ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.