ಮಡಿಕೇರಿ, ಸೆ. 11: ಕಳೆದ ಹನ್ನೆರಡು ದಿನಗಳಿಂದ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೇವಲ ನಾಲ್ವರು ಸಿಬ್ಬಂದಿ ಮಾತ್ರ ನಿರಂತರ ಕಾಯಕ ನಿರತರಾಗಿರುವ ಅಂಶ ಬೆಳಕಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಆಗಸ್ಟ್ 31 ರಂದು ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಅಂದಿನಿಂದ ಇದುವರೆಗೆ ಈ ಠಾಣೆಯ 17 ಮಂದಿಗೆ ಕೊರೊನಾ ಸೋಂಕಿನ ಪರಿಣಾಮ, ನಿತ್ಯ ಕರ್ತವ್ಯ ನಿರತರ ಸಂಖ್ಯೆ ಇಳಿಮುಖಗೊಂಡು ಅವರೆಲ್ಲರೂ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ಸಾರ್ವಜನಿಕ ಸಂಪರ್ಕ ತಡೆಯಲ್ಲಿದ್ದಾರೆ. ಹೀಗಾಗಿ ಉಳಿದಿರುವ ನಾಲ್ವರಷ್ಟೇ ಈಗ ಹಗಲು - ರಾತ್ರಿ ದೈನಂದಿನ ಕೆಲಸ ಕಾರ್ಯ ನಿರ್ವಹಿಸುವಂತಾಗಿದೆ.