ಮಡಿಕೇರಿ, ಸೆ. 11: ಕೊಡಗು ಜಿಲ್ಲೆಯಲ್ಲಿ ಮಳೆಯ ನಡುವೆ ರಸ್ತೆ ಹಾಳಾಗದಂತೆ ನಿಗಾ ವಹಿಸುವುದರೊಂದಿಗೆ, ಬೃಹತ್ ಸಾಂದ್ರತೆಯ ಲಾರಿಗಳ ಸಂಚಾರ ಹಾಗೂ ಮರ ಸಾಗಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಪ್ರಸ್ತುತ ನಿಯಮಾನುಸಾರ ಮರಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ‘ಶಕ್ತಿ’ ಈ ಕುರಿತು ಅವರನ್ನು ಸಂದರ್ಶಿಸಿದಾಗ, ಮಳೆಗಾಲದಲ್ಲಿ ಮರಗಳ ಸಾಗಾಟ ನಿರ್ಬಂಧ ಅವಧಿ ಇದೇ ತಾ. 7ಕ್ಕೆ ಮುಕ್ತಾಯಗೊಂಡಿದೆ ಎಂದು ವಿವರಿಸಿದರು.

ಅಲ್ಲದೆ, ಅರಣ್ಯ ಇಲಾಖೆಯ ನಿಯಮಗಳಿಗೆ ಒಳಗೊಂಡಂತೆ ಮರಗಳ ಸಾಗಾಟ ಮತ್ತು ಡಿಪೋಗಳಿಂದ ಇಲಾಖೆಯು ಸರಕಾರದ ಅನುಮತಿಯೊಂದಿಗೆ ಮರ ದಾಸ್ತಾನು ಹರಾಜು ಮತ್ತು ಸಾಗಾಟಗೊಳಿಸಲು ಜಿಲ್ಲಾಡಳಿತದಿಂದ ಆಕ್ಷೇಪ ಇಲ್ಲವೆಂದೂ ಜಿಲ್ಲಾಧಿಕಾರಿಯವರು ‘ಶಕ್ತಿ’ಯೊಂದಿಗೆ ಮಡಿಕೇರಿ, ಸೆ. 11: ಕೊಡಗು ಜಿಲ್ಲೆಯಲ್ಲಿ ಮಳೆಯ ನಡುವೆ ರಸ್ತೆ ಹಾಳಾಗದಂತೆ ನಿಗಾ ವಹಿಸುವುದರೊಂದಿಗೆ, ಬೃಹತ್ ಸಾಂದ್ರತೆಯ ಲಾರಿಗಳ ಸಂಚಾರ ಹಾಗೂ ಮರ ಸಾಗಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಪ್ರಸ್ತುತ ನಿಯಮಾನುಸಾರ ಮರಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ. ‘ಶಕ್ತಿ’ ಈ ಕುರಿತು ಅವರನ್ನು ಸಂದರ್ಶಿಸಿದಾಗ, ಮಳೆಗಾಲದಲ್ಲಿ ಮರಗಳ ಸಾಗಾಟ ನಿರ್ಬಂಧ ಅವಧಿ ಇದೇ ತಾ. 7ಕ್ಕೆ ಮುಕ್ತಾಯಗೊಂಡಿದೆ ಎಂದು ವಿವರಿಸಿದರು. ಅಲ್ಲದೆ, ಅರಣ್ಯ ಇಲಾಖೆಯ ನಿಯಮಗಳಿಗೆ ಒಳಗೊಂಡಂತೆ ಮರಗಳ ಸಾಗಾಟ ಮತ್ತು ಡಿಪೋಗಳಿಂದ ಇಲಾಖೆಯು ಸರಕಾರದ ಅನುಮತಿಯೊಂದಿಗೆ ಮರ ದಾಸ್ತಾನು ಹರಾಜು ಮತ್ತು ಸಾಗಾಟಗೊಳಿಸಲು ಜಿಲ್ಲಾಡಳಿತದಿಂದ ಆಕ್ಷೇಪ ಇಲ್ಲವೆಂದೂ ಜಿಲ್ಲಾಧಿಕಾರಿಯವರು ‘ಶಕ್ತಿ’ಯೊಂದಿಗೆ ಒಮ್ಮೆ ಮರಗಳ ಹರಾಜು ಪ್ರಕ್ರಿಯೆ ನಡೆದಿದ್ದು, ಅನಂತರದಲ್ಲಿ ಕೊರೊನಾ ಕಾರಣಕ್ಕಾಗಿ ಸರಕಾರವೇ ಹರಾಜು ನಡೆಸದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿತ್ತು. ಅದೇ ರೀತಿ ಕುಶಾಲನಗರ ಬಳಿ ಆನೆಕಾಡು ಡಿಪೋದಲ್ಲಿ ಮಾರ್ಚ್ ತಿಂಗಳು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಆ ವೇಳೆಗೆ ಕೊರೊನಾ ಸೋಂಕು ತೀವ್ರಗೊಂಡ ಕಾರಣ; ಮಾರ್ಚ್ 21 ಹಾಗೂ 23ರ ಎರಡು ದಿನ ನಡೆದಿದ್ದ ಪ್ರಕ್ರಿಯೆ ಸ್ಥಗಿತಗೊಳಿಸಿ ಒಂದು ವಾರ ನಡೆಯಬೇಕಿದ್ದ ಹರಾಜಿಗೆ ಸರಕಾರ ತಡೆ ಹಾಕಿತ್ತು.

ಮರು ಪ್ರಸ್ತಾಪ : ಇದೀಗ ಕೊರೊನಾ ನಿರ್ಬಂಧಗಳ ಸಡಿಲಿಕೆಯೊಂದಿಗೆ; ಜಿಲ್ಲಾಡಳಿತ ಮಳೆಯ ಕಾರಣ ಮರ ಸಾಗಾಟ ನಿಷೇಧಿಸಿದ್ದ ಅವಧಿ ಮುಕ್ತಾಯಗೊಂಡಿರುವ ಕಾರಣ, ಮರು ಪ್ರಕ್ರಿಯೆಗೆ ಅವಕಾಶ ಲಭಿಸಿದೆ. ಹೀಗಾಗಿ ಡಿಪೋಗಳಲ್ಲಿ ದಾಸ್ತಾನು ಇರುವ ಬೆಲೆ ಬಾಳುವ ಬೀಟೆ, ತೇಗ ಮರಗಳೊಂದಿಗೆ ಇತರ ಕಾಡು ಮರಗಳು ಹಾಗೂ ಮೆದು ಮರ, ಉರುವಲು ಮರಗಳ ಹರಾಜಿಗೆ ಅನುವು ಮಾಡಿಕೊಡುವಂತೆ ಕೊಡಗು ಅರಣ್ಯ ಇಲಾಖೆಯ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

7 ಸಾವಿರ ಮೀಟರ್ ದಾಸ್ತಾನು : ‘ಶಕ್ತಿ’ಗೆ ವಿಶ್ವಸನೀಯ ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ ಆನೆಕಾಡು ಹಾಗೂ ತಿತಿಮತಿ ನಾಟಾ ಸಂಗ್ರಹಾಗಾರಗಳಲ್ಲಿ ಸುಮಾರು 7 ಸಾವಿರ ಮೀಟರ್ ಮರಗಳ ದಾಸ್ತಾನಿದೆ. ಈ ಪೈಕಿ 4 ಸಾವಿರ ಮೀಟರ್‍ನಷ್ಟು ಬೀಟೆ ಇತ್ಯಾದಿ ಇದ್ದು, ಮಿಕ್ಕಿದಂತೆ ಕಾಡು ಮರಗಳ ದಾಸ್ತಾನು ಗೋಚರಿಸಿದೆ.

ಖರೀದಿ ಪ್ರಕ್ರಿಯೆ : ಬೆಲೆ ಬಾಳುವ ಮರಗಳನ್ನು ಕೇರಳ ಹಾಗೂ ಕೊಡಗು ಸೇರಿದಂತೆ ಅನೇಕರು ಹರಾಜಿನಲ್ಲಿ ಮನೆಗಳ ನಿರ್ಮಾಣಕ್ಕಾಗಿ ಮತ್ತು ಪೀಠೋಪಕರಣಗಳಿಗೆ ಬಿಡ್‍ನಲ್ಲಿ ಖರೀದಿಸುತ್ತಾರೆ. ಅಲ್ಲದೆ,

ಮೆದು ಮರಗಳನ್ನು ಮೈಸೂರು, ತಮಿಳುನಾಡು ಸೇರಿದಂತೆ

ಉತ್ತರ ಕರ್ನಾಟಕ ಮಂದಿ ಬೆಂಕಿಪೊಟ್ಟಣ, ಫ್ಲೈವುಡ್ ತಯಾರಿಕೆ ಇತ್ಯಾದಿಗಾಗಿ ಕೊಂಡೊಯ್ಯುತ್ತಾರೆ ಎಂದು ಅರಣ್ಯ ಇಲಾಖೆಯ ಮೂಲಗಳಿಂದ ಮಾಹಿತಿ ಲಭಿಸಿದೆ.

(ಮೊದಲ ಪುಟದಿಂದ) ಒಟ್ಟಿನಲ್ಲಿ ಪ್ರಸ್ತುತ ಮಳೆ ಇಳಿಮುಖಗೊಂಡು, ಕೊರೊನಾ ಸೋಂಕಿನ ನಿರ್ಬಂಧ ಸಡಿಲಿಕೆ ನಡುವೆ ಅರಣ್ಯ ಇಲಾಖೆಯಿಂದ ಡಿಪೋಗಳಲ್ಲಿ ಮರ ದಾಸ್ತಾನು ಹಾಳಾಗದಂತೆ ಹರಾಜು ಮೂಲಕ ಮಾರಾಟಗೊಳಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಹೀಗಿದ್ದರೂ ಹಿಂದಿನ ಮುಕ್ತ ಹರಾಜು ಬದಲಿಗೆ ಎಲ್ಲವನ್ನು ‘ಆನ್‍ಲೈನ್’ ಮುಖಾಂತರ ಸರಕಾರ ಮಾರಾಟ ಯೋಜನೆ ರೂಪಿಸಿರುವ ಕಾರಣ ಹೆಚ್ಚಿನ ವ್ಯಾಪಾರಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.