ಮಡಿಕೇರಿ, ಸೆ. 10: ಬಿರುನಾಣಿಯ ಕರ್ತಮಾಡ ಕುಟುಂಬಸ್ಥರು ಇತ್ತೀಚೆಗೆ ತಲಕಾವೇರಿ, ಭಾಗಮಂಡಲ ಹಾಗೂ ಇಗ್ಗುತ್ತಪ್ಪ ದೇವಾಲಯಗಳಿಗೆ ತೆರಳಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಆಡಳಿತ ಮಂಡಳಿ ಅಧ್ಯಕ್ಷ ಕರ್ತಮಾಡ ಸುರೇಶ್ ಮಾದಪ್ಪ (ಚುಚ್ಚ) ನೇತೃತ್ವದಲ್ಲಿ ಹಲವರು ಭಾಗಿಗಳಾಗಿದ್ದರು.