ಶನಿವಾರಸಂತೆ, ಸೆ. 10: ಶನಿವಾರಸಂತೆ ಗ್ರಾ.ಪಂ.ನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಸ್ ನಿಲ್ದಾಣದಲ್ಲಿದ್ದ ಅನಾಥ ವೃದ್ಧೆಯೋರ್ವರನ್ನು ಮಡಿಕೇರಿಯ ತನಲ್ ಕೂರ್ಗ್ ಅನಾಥಾಶ್ರಮಕ್ಕೆ ಕರವೇ ಕಾರ್ಯಕರ್ತರು ಸೇರ್ಪಡೆಗೊಳಿಸಿದರು.
ವೃದ್ಧೆಗೆ ಬಟ್ಟೆ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ಗ್ರಾ.ಪಂ. ಮಾಜಿ ಸದಸ್ಯ ಎಸ್.ಎನ್. ಪಾಂಡು ಅವರು ಕರವೇ ಕಾರ್ಯಕರ್ತರಿಗೆ ನೀಡಿದರು. ಶನಿವಾರಸಂತೆಯ ಸುರೇಶ್ ಪಂಡಿತ್, ಚಂದ್ರು, ಕರವೇ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಮತ್ತು ಕಾರ್ಯಕರ್ತರಾದ ಮೋಹನ್, ರಕ್ಷಿತ್, ರಂಜಿತ್ ಅವರುಗಳು ಈ ಸಂದರ್ಭ ಇದ್ದರು.