ಮಡಿಕೇರಿ, ಸೆ. 9: ಹಿರಿಯ ವಕೀಲ ಹಾಗೂ ನೋಟರಿಯೂ ಆಗಿದ್ದ, ಮಡಿಕೇರಿಯ ಗೌಡ ಸಮಾಜದ ಬಳಿಯ ನಿವಾಸಿ, ಬಿ.ಆರ್. ಹೊನ್ನಪ್ಪ ತಾ. 9 ರಂದು ಮಂಗಳೂರಿನಲ್ಲಿ ನಿಧನರಾದರು. ಮಡಿಕೇರಿಯ ಜಿಲ್ಲಾ ನ್ಯಾಯಾಲಯದಲ್ಲಿ 40 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಹೊನ್ನಪ್ಪ ಅವರು ಪತ್ನಿ ವಕೀಲರಾಗಿರುವ ದಯಾ ಹೊನ್ನಪ್ಪ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹೊನ್ನಪ್ಪ ಅವರ ನಿಧನಕ್ಕೆ ಮಡಿಕೇರಿ ವಕೀಲರ ಸಂಘ ಸಂತಾಪ ವ್ಯಕ್ತಪಡಿಸಿದೆ.