ಮಡಿಕೇರಿ, ಸೆ. 9: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 25 ಕ್ಕೇರಿದೆ. ಕುಶಾಲನಗರ ಹೋಬಳಿ ರಂಗಸಮುದ್ರ ಗ್ರಾಮದ ಕಬ್ಬಿನಗದ್ದೆ ನಿವಾಸಿ 48 ವರ್ಷದ ಪುರುಷರೊಬ್ಬರು ತಾ.9 ರಂದು ಬೆಳಗ್ಗಿನ ಜಾವ 4:30 ಕ್ಕೆ ನಿಧನರಾದರು. ಇವರಿಗೆ ತಾ.7 ರಂದು ಮಧ್ಯರಾತ್ರಿ ತೀವ್ರ ಉಸಿರಾಟದ ತೊಂದರೆ, ಸುಸ್ತು ಮತ್ತು ಎದೆನೋವು ಕಾಣಿಸಿಕೊಂಡಿದ್ದರಿಂದ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪರೀಕ್ಷೆ ನಡೆಸಲಾಗಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಐ.ಸಿ.ಯುನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದ್ದು, ತಾ.9 ರÀಂದು ಬೆಳಗ್ಗಿನ ಜಾವ 4.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಹೊಸದಾಗಿ 61 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1826 ಕೊರೊನಾ ಪ್ರಕರಣಗಳು ವರದಿಯಾಗಿವೆ. 1471 ಮಂದಿ ಗುಣಮುಖರಾಗಿದ್ದಾರೆ. 331 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 113 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 62 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 156 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 320 ನಿಯಂತ್ರಿತ ವಲಯಗಳಿವೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿ ಸಂಪಿಗೆಕಟ್ಟೆಯ ಅಂಗನವಾಡಿ ಬಳಿಯ 32 ವರ್ಷದ ಪುರುಷ. ಕುಶಾಲನಗರ ಶಿರಂಗಾಲದ ಮುರ್ಲು ಕೊಪ್ಪಲುವಿನ 65 ವರ್ಷದ ಪುರುಷ, ಮಡಿಕೇರಿ ಗೌಳಿ ಬೀದಿಯ ಕಂಚಿ ಕಾಮಾಕ್ಷಿ ದೇವಾಲಯ ಬಳಿಯ 25 ವರ್ಷದ ಪುರುಷ, ನಾಪೆÇೀಕ್ಲುವಿನ ಕೆನರಾ ಬ್ಯಾಂಕ್ ಸಮೀಪದ 25 ವರ್ಷದ ಪುರುಷ, ನಾಪೆÇೀಕ್ಲು ಬಲ್ಲಮಾವಟಿ ಪಂಚಾಯಿತಿ ಸಮೀಪದ 47 ವರ್ಷದ ಮಹಿಳೆ, ಮಡಿಕೇರಿ ಚೆಯ್ಯಂಡಾಣೆ ಅಂಚೆಯ ನರಿಯಂದಡ ಗ್ರಾಮದ 55 ವರ್ಷದ ಮಹಿಳೆ, ಕುಶಾಲನಗರ ಗುಮ್ಮನಕೊಲ್ಲಿಯ 38 ವರ್ಷದ ಮಹಿಳೆ, ಕುಶಾಲನಗರ ಗೋಪಾಲ್ ವೃತ್ತ ಬಳಿಯ 46 ವರ್ಷದ ಪುರುಷ, ಕುಶಾಲನಗರದ ನೆಹರು ಎಕ್ಸ್ಟೆನ್ಸ್ನ್ನಿನ ಬಲಮುರಿ ದೇವಾಲಯ ಬಳಿಯ 40 ವರ್ಷದ ಪುರುಷ, ನೆಲ್ಲಿಹುದಿಕೇರಿ ನಲವತ್ತೆಕ್ರೆಯ ಮಸೀದಿ ಬಳಿಯ 32 ಮತ್ತು 25 ವರ್ಷದ ಮಹಿಳೆ, ಕುಶಾಲನಗರದ ಗೊಂದಿಬಸವನಹಳ್ಳಿಯ ಪ್ರಾಥಮಿಕ ಶಾಲೆ ಸಮೀಪದ 30 ವರ್ಷದ ಪುರುಷ, ವೀರಾಜಪೇಟೆ ಸುಂಕದಕಟ್ಟೆಯ 52 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 70 ವರ್ಷದ ಮಹಿಳೆ, ಪೆÇನ್ನಂಪೇಟೆಯ ಕುಂದ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿಯ 27 ವರ್ಷದ ಪುರುಷ, ವೀರಾಜಪೇಟೆ ಎಚ್.ಸಿ ಪುರದ ಎಂ.ಆರ್.ಎಫ್ ಕಾರ್ಖಾನೆ ಹಿಂಭಾಗದ 50 ವರ್ಷದ ಪುರುಷ, ಗೋಣಿಕೊಪ್ಪ ಕೈಕೇರಿ ಭಗವತಿ ದೇವಾಲಯ ಬಳಿಯ 80 ವರ್ಷದ ಪುರುಷ, ಮಡಿಕೇರಿ ಕಾವೇರಿ ಹಾಲ್ ಬಳಿಯ ಪ್ರಕೃತಿ ಬಡಾವಣೆಯ 24 ಮತ್ತು 55 ವರ್ಷದ ಮಹಿಳೆ. ಮಡಿಕೇರಿ ಪೆನ್ ಷನ್ ಲೈನಿನ 24 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ, ಮಡಿಕೇರಿ ಕಾವೇರಿ ಲೇಔಟಿನ 56 ವರ್ಷದ ಪುರುಷ, ಮಡಿಕೇರಿ ಎಮ್ಮೆಮಾಡು ಗ್ರಾಮದ ಪ್ರಾಥಮಿಕ ಶಾಲೆ ಬಳಿಯ 49 ವರ್ಷದ ಪುರುಷ, ಮಡಿಕೇರಿ ಬೊಯಿಕೇರಿಯ ಇಬ್ನಿವಳವಾಡಿ ಗ್ರಾಮದ 18 ಮತ್ತು 45 ವರ್ಷದ ಮಹಿಳೆ, ಪಿರಿಯಾಪಟ್ಟಣದ 62 ವರ್ಷದ ಪುರುಷ, ಕುಶಾಲನಗರ ಜಾತ್ರೆ ಮೈದಾನದ 9 ವರ್ಷದ ಬಾಲಕಿ, ಕುಶಾಲನಗರದ ಕಾವೇರಿ ಬಡಾವಣೆಯ 21 ಮತ್ತು 48 ವರ್ಷದ ಮಹಿಳೆ, ಕುಶಾಲನಗರದ ಹೌಸಿಂಗ್ ಬೋರ್ಡಿನ 33 ವರ್ಷದ ಮಹಿಳೆ, 15 ವರ್ಷದ ಬಾಲಕಿ, 19 ವರ್ಷದ ಪುರುಷ, 54 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿ, ಮಡಿಕೇರಿ ಜಯನಗರದ 14 ನೇ ಬ್ಲಾಕಿನ 78 ವರ್ಷದ ಮಹಿಳೆ, ಮಡಿಕೇರಿ ಪುಟಾಣಿ ನಗರದ ಚಾಮರಾಜ ಬಂಗ್ಲೆ ರಸ್ತೆಯ ಹಿಂಭಾಗದ 36 ಮತ್ತು 30 ವರ್ಷದ ಮಹಿಳೆಯರು, ಮಡಿಕೇರಿ ಹೊದ್ದೂರು ಅಂಚೆಯ ಹೊದವಾಡ ಗ್ರಾಮದ ಮಸೀದಿ ಬಳಿಯ 39 ವರ್ಷದ ಪುರುಷ, ಗೋಣಿಕೊಪ್ಪದ ಪಾಲಿಬೆಟ್ಟ ರಸ್ತೆಯ ತಾಲೂಕು ಪಂಚಾಯಿತಿ ವಸತಿ ಗೃಹದ 17 ವರ್ಷದ ಬಾಲಕ, 45 ವರ್ಷದ ಮಹಿಳೆ ಮತ್ತು 29 ವರ್ಷದ ಪುರುಷ, ಗೋಣಿಕೊಪ್ಪದ 2ನೇ ಬ್ಲಾಕಿನ 32 ವರ್ಷದ ಪುರುಷ, ಕುಶಾಲನಗರ ವಿವೇಕಾನಂದ ಕಾಲೇಜು ಬಳಿಯ 27 ವರ್ಷದ ಪುರುಷ, ಕುಶಾಲನಗರ ರಂಗಸಮುದ್ರದ ಕಬ್ಬಿನಗದ್ದೆಯ 48 ವರ್ಷದ ಪುರುಷ, ಗೋಣಿಕೊಪ್ಪ ಸರ್ಕಾರಿ ಶಾಲೆ ಸಮೀಪದ 48 ವರ್ಷದ ಮಹಿಳೆ, ಕುಶಾಲನಗರ ಬಿ.ಎಂ ರಸ್ತೆಯ ರೋಟರಿ ಎದುರಿನ 65 ವರ್ಷದ ಮಹಿಳೆ, ಸೋಮವಾರಪೇಟೆ ಎಂ.ಡಿ ಬ್ಲಾಕಿನ 60 ವರ್ಷದ ಮಹಿಳೆ, ಮಡಿಕೇರಿ ಆಸ್ಪತ್ರೆ ವಸತಿಗೃಹದ 43 ವರ್ಷದ ಪುರುಷ, ಮಡಿಕೇರಿ ಡೈರಿ ಫಾರಂ ಹಿಂಭಾಗದ 31 ವರ್ಷದ ಪುರುಷ, ಮಡಿಕೇರಿ ಚಾಮುಂಡೇಶ್ವರಿ ನಗರದ 37 ವರ್ಷದ ಪುರುಷ, ಮಡಿಕೇರಿ ಪಾರಾಣೆ ಅಂಚೆಯ ಪಾರಣೆ ಹೈಸ್ಕೂಲ್ ಬಳಿಯ 13 ವರ್ಷದ ಬಾಲಕಿ, ಬಿಟ್ಟಂಗಾಲ ಅಂಚೆಯ 46 ವರ್ಷದ ಪುರುಷ, ವೀರಾಜಪೇಟೆ ಕಾನೂರುವಿನ ವಿಜಯ ಬ್ಯಾಂಕ್ ಬಳಿಯ ನವೀನ್ ಹೊಟೇಲಿನ 44 ಮತ್ತು 20 ವರ್ಷದ ಮಹಿಳೆ, ಹಾಸನದ ಕೊಣನೂರಿನ ಪೆÇಲೀಸ್ ಠಾಣೆ ಬಳಿಯ 53 ವರ್ಷದ ಪುರುಷ, ಸೋಮವಾರಪೇಟೆ ಕಿರಗಂದೂರಿನ ಬಗಲ್ ಕಂಡಿಯ 61 ವರ್ಷದ ಪುರುಷ, ಮಡಿಕೇರಿ ಚೆಟ್ಟಿಮಾನಿ ಅಂಚೆಯ ಕುಂದಚೇರಿ ಗ್ರಾಮದ 84 ವರ್ಷದ ಮಹಿಳೆ, ವೀರಾಜಪೇಟೆ ನೆಹರೂ ನಗರದ ಅಂಗನವಾಡಿ ಬಳಿಯ 65 ವರ್ಷದ ಪುರುಷ, ಮಡಿಕೇರಿ ಮಹೀಂದ್ರಾ ಕ್ಲಬ್‍ನ 27 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ಅಂಬೇಡ್ಕರ್ ಕಾಲೋನಿಯ 28 ವರ್ಷದ ಮಹಿಳೆ, ಗೋಣಿಕೊಪ್ಪದ ಎಚ್.ಸಿ ಪುರ ಜೆ.ಬಿ ಕಾಂಪ್ಲೆಕ್ಸಿನ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.