ಕೂಡಿಗೆ, ಸೆ. 9: ಕೂಡಿಗೆ ಗ್ರಾಮ ಪಂಚಾಯಿತಿಯ ಅನೇಕ ವಾರ್ಡ್‍ಗಳಲ್ಲಿ ಒಳಚರಂಡಿಯ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ಮಳೆ ನೀರು ಸೇರಿದಂತೆ ಕಲುಶಿತ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರು ತಿರುಗಾಡಲು ಬಹಳ ಕಷ್ಟವಾಗುತ್ತಿದೆ. ನೀರು ಸರಾಗವಾಗಿ ಹರಿಯಲು ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೂಡಿಗೆ ವ್ಯಾಪ್ತಿಯ ಸರ್ಕಲ್‍ನ ಎರಡು ಕಡೆಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ಬೇರೆ ಬೀದಿಗಳಿಂದ ಹರಿದು ಬರುವ ನೀರು ಸರ್ಕಲ್‍ನ ಹತ್ತಿರ ಸ್ಥಗಿತಗೊಂಡ ಹಿನ್ನೆಲೆ ದುರ್ವಾಸನೆಯಿಂದ ಕೂಡಿದೆ.
ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಒಳಚರಂಡಿ ಕಾಮಗಾರಿ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.