ಮಡಿಕೇರಿ, ಸೆ. 8: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡವ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿಗಳಾದ ಐಚೆಟ್ಟೀರ ಮಾ. ಮುತ್ತಣ್ಣ ಹಾಗೂ ಬಾಚಮಾಡ ಡಿ. ಗಣಪತಿ ಅವರ ಜನ್ಮ ಶತಮಾನೋತ್ಸವ ನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಗಿದೆ.
ಈ ಸ್ಮರಣ ಸಂಚಿಕೆಗೆ ಪ್ರಬಂಧ ಬರೆಯಲು ಇಚ್ಚಿಸುವವರು ಈ ಮೇಲಿನ ಸಾಹಿತಿಗಳ ಬಗ್ಗೆ ಯಾವುದೇ ವಿಷಯದಲ್ಲಿ ಲೇಖನವನ್ನು ಬರೆದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ತಾ. 10.10.2020ರ ಒಳಗೆ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ. ಆಯ್ದ ಪ್ರಬಂಧಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.