*ಕೊಡ್ಲಿಪೇಟೆ, ಸೆ.8 : ದೊಡ್ಡಕೊಡ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಎಸ್.ಡಿ.ಎಂ.ಸಿ ಕೊಡಗು ಜಿಲ್ಲಾ ಸಮಿತಿ ಮತ್ತು ಸ್ಥಳೀಯ ಶಾಲೆಯ ಅಧ್ಯಕ್ಷ ಕೆ.ಎ. ನಾಗೇಶ್, ಸದಸ್ಯರಾದ ನಾಗೇಶ್ ಕೆ. ಎಸ್., ವಸಂತ, ನವೀನ, ಹಸೀನಾ, ಜ್ಯೋತಿ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಮಂತ್, ಉಪಾಧ್ಯಕ್ಷ ಯೋಗಾನಂದ, ಕಾರ್ಯದರ್ಶಿ ಕಿಶೋರ್, ಸದಸ್ಯರಾದ ಶರತ್, ಕೇಶವ, ಗಣಪತಿ ಬಾಯ್ಸ್ ತಂಡದ ಅಧ್ಯಕ್ಷ ದಯಾನಂದ್, ಸಚಿನ್ , ದೊಡ್ಡಕೊಡ್ಲಿ ಶಾಲೆಯ ಮುಖ್ಯ ಶಿಕ್ಷಕ.ಹೆಚ್.ಎನ್. ಮಂಜುನಾಥ್, ಸಹ ಶಿಕ್ಷಕ ಫಯಾಜ್ ಮತ್ತು ಚೈತ್ರ, ಸಿ.ಆರ್ ಪಿ ಸುರೇಶ್, ವಿದ್ಯಾರ್ಥಿಗಳ ಪೆÇೀಷಕರು ಶ್ರಮದಾನದಲ್ಲಿ ಭಾಗಿಯಾಗಿದ್ದರು. ದೊಡ್ಡಕೊಡ್ಲಿ ಶಾಲೆಯ ಆವರಣದಲ್ಲಿ ಬೆಳೆದಿದ್ದ ಗಿಡಗಂಟಿ, ಮಳೆಗೆ ಉರುಳಿದ್ದ ಮರಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.