ಸಿದ್ದಾಪುರ, ಸೆ. 8: ಅಮ್ಮತ್ತಿ ಹೋಬಳಿ ನಾಡ ಕಚೆÉೀರಿಯಲ್ಲಿ ಗ್ರಾಮ ಲೆಕ್ಕಿಗರ ಸಂಖ್ಯೆಯು ಕಡಿಮೆಯಾಗಿದ್ದು, ಇದರಿಂದಾಗಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮ್ಮತ್ತಿ ಹೋಬಳಿ ವ್ಯಾಪ್ತಿಯ ನಾಡ ಕಚೆÉೀರಿಗೆ 14 ಗ್ರಾಮಗಳು ಸೇರ್ಪಡೆಗೊಂಡಿದ್ದು, ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಬೇಕಾದ ಗ್ರಾಮ ಲೆಕ್ಕಿಗರ ಕೊರತೆ ಇದ್ದು, ಕೇವಲ 4 ಮಂದಿಯಷ್ಟೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇರುವ 4 ಮಂದಿ ಗ್ರಾಮ ಲೆಕ್ಕಿಗರು ಹಾಗೂ ಓರ್ವ ಕಂದಾಯ ಪರಿವೀಕ್ಷಕ ಸೇರಿ ಒಬ್ಬೊಬ್ಬರು 2-3 ಗ್ರಾಮಗಳ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಇವರುಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಇದಲ್ಲದೇ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳ ಜೊತೆಗೆ ಮಳೆ ಹಾನಿ ಪರಿಹಾರ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಗಮನಹರಿಸಿ ಅಮ್ಮತ್ತಿ ನಾಡ ಕಚೆÉೀರಿಗೆ ಹೆಚ್ಚಿನ ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಮ್ಮತ್ತಿ ನಾಡ ಕಚೇರಿಯಲ್ಲಿ ಇರುವ ಯು.ಪಿ.ಎಸ್ ಕೆಟ್ಟು ವರ್ಷಗಳೇ ಕಳೆದಿದ್ದರೂ ಈವರೆಗೂ ಹೊಸ ಯು.ಪಿ.ಎಸ್ ಅಳವಡಿಸಿಲ್ಲ. ಅಲ್ಲದೇ ವಿದ್ಯುತ್ ಕಣ್ಣು ಮುಚ್ಚಾಲೆಯಿಂದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೆÉೀರಿಗೆ ಭೇಟಿ ನೀಡಿ ದಿನಗಟ್ಟಲೆ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆಯೂ ಜಿಲ್ಲಾಧಿಕಾರಿಗಳು ಗಮನಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.