ವೀರಾಜಪೇಟೆ, ಸೆ. 8: ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಬ್ಲಡ್ ಡೋನರ್ಸ್ ಜಂಟಿ ಆಶ್ರಯದಲ್ಲಿ ವೀರಾಜಪೇಟೆ ದೊಡ್ಡಟ್ಟಿಚೌಕಿ ಬಳಿ ಇರುವ ಶ್ರೀ ಕೃಷ್ಣ ಕಂಫಟ್ರ್ಸ್‍ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಸಲಾಯಿತು.
‘ರಕ್ತದಾನ ಮಹಾದಾನ’ ಎನ್ನುವ ಶೀರ್ಷಿಕೆಯಡಿಯಲ್ಲಿ ಆಯೋಜನೆಯಾಗಿದ್ದ ಶಿಬಿರದಲ್ಲಿ ಕ.ರ.ವೇ. ಸದಸ್ಯರಿಂದ ಮತ್ತು ಸ್ವಯಂ ಪ್ರೇರಿತರಾಗಿ ಬಂದಿದ್ದ ರಕ್ತದಾನಿಗಳಿಂದ 52 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕೋವಿಡ್-19ನ ಕಾರಣದಿಂದ ಸುರಕ್ಷತೆಗೆ ಮೊದಲ ಆದ್ಯತೆ ನೀಡುವ ಮೂಲಕ ಸಮರ್ಪಕವಾದ ನಿರ್ವಹಣೆ ಮಾಡಲಾಗಿತ್ತು. ಈ ಸಂದರ್ಭ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತನಿಧಿ ಘಟಕದ ಮೇಲ್ವಿಚಾರಕ ಕರುಂಬಯ್ಯ ಅವರು ಸಂಗ್ರಹವಾದ ರಕ್ತವನ್ನು ರಕ್ತನಿಧಿ ಘಟಕದಲ್ಲಿ ಶೇಖರಿಸಲಾಗುವುದು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಅತೀ ಅವಶ್ಯಕ ಸಂದರ್ಭಗಳಲ್ಲಿ ರಕ್ತವನ್ನು ಒದಗಿಸುವಲ್ಲಿ ನೆರವಾದ ಮೈಸೂರಿನ ಷಂಶುದ್ದೀನ್ ಅವರನ್ನು ಸನ್ಮಾನಿಸಲಾಯಿತು. ರಕ್ತದ ಮನವಿಗಳಿಗೆ ಸ್ಪಂದಿಸಿ ನೆರವಾದ ರಾಯ್ ರವಿ, ಶಕ್ತಿ ಆಶ್ರಮದ ಮೇಲ್ವಿಚಾರಕ ಹೆಚ್.ಆರ್. ಸತೀಶ್, ರಂಜಿತ್ ಕವಲಪಾರ, ದೀಪಕ್ ಪೆÇನ್ನಪ್ಪ, ಚಪ್ಪೇರ ಯತಿನ್, ಚಂದನ್ ನಂದರಬೆಟ್ಟು ಹಾಗೂ ರಕ್ತನಿಧಿ ಘಟಕದ ಕರುಂಬಯ್ಯ ಇವರುಗಳನ್ನು ಗೌರವಿಸಲಾಯಿತು.
ಈ ಸಂದರ್ಭ ಮಾಧ್ಯಮದ ಮುಖಾಂತರ ವೀರಾಜಪೇಟೆಯಲ್ಲಿ ಒಂದು ರಕ್ತನಿಧಿ ಕೇಂದ್ರ ಸ್ಥಾಪಿಸಲು ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕ.ರ.ವೇ. ಜಿಲ್ಲಾಧ್ಯಕ್ಷ ಜಗದೀಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಟಿ.ವಿ. ಅನಿಲ್‍ಕುಮಾರ್, ನೆಲ್ಲಿಹುದಿಕೇರಿ ಹೋಬಳಿ ಮಹಿಳಾ ಅಧ್ಯಕ್ಷೆ ವಿನೋದಿನಿ, ಸಿದ್ದಾಪುರ ಹೋಬಳಿ ಅಧ್ಯಕ್ಷ ಸಂತೋಷ್‍ಕುಮಾರ್, ಖಜಾಂಚಿ ತಬ್ರೇಝ್, ನಗರ ಉಪಾಧ್ಯಕ್ಷ ಫೈಸಲ್, ಜಿಲ್ಲಾ ಉಪಾಧ್ಯಕ್ಷ ಷರೀಫ್, ತಾಲೂಕು ಉಪಾಧ್ಯಕ್ಷ ಸಂತೋಷ್‍ಕುಮಾರ್, ಆಟೋ ಸಂಘದ ಅಧ್ಯಕ್ಷ ಎ. ಸತೀಶ್ ಹಾಗೂ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ಹೆಚ್.ಆರ್. ವಿನು, ಕಾರ್ಯದರ್ಶಿ ಮೈಕಲ್ ವೇಗಸ್, ಸಹ ಕಾರ್ಯದರ್ಶಿ ಸುಕುಮಾರ, ಸಂಘಟನಾ ಕಾರ್ಯದರ್ಶಿ ಸಮೀರ್, ಕೀರ್ತಿ, ಸಾದಿಕ್ ಉಪಸ್ಥಿತರಿದ್ದರು.