ಪೆÇನ್ನಂಪೇಟೆ, ಸೆ. 8: ಇತ್ತೀಚಿಗೆ ಬಿದ್ದ ಭಾರಿ ಮಳೆಯಿಂದಾಗಿ ಕಾಫಿ ಬೆಳೆ ನಷ್ಟವನ್ನು ಅಂದಾಜಿಸಲು ಕಾಫಿ ಮಂಡಳಿ ವತಿ ಯಿಂದ ನಡೆಸಿದ ಸಮೀಕ್ಷೆ ತೀರಾ ಅವೈಜ್ಞಾನಿಕವಾದದ್ದು. ಇದನ್ನು ಬೆಳೆಗಾರರ ಪರವಾಗಿ ಖಂಡಿಸ ಲಾಗುವುದು ಎಂದು ಹೇಳಿರುವ ಜಿ.ಪಂ. ಸದಸ್ಯ ಬಿ.ಎನ್. ಪ್ರತ್ಯು, ಬೆಳೆಗಾರರ ಹಿತದೃಷ್ಟಿಯಿಂದ ಕಾಫಿ ಮಂಡಳಿ ಮತ್ತೊಮ್ಮೆ ವೈಜ್ಞಾನಿಕವಾಗಿ ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ತಪ್ಪಿದಲ್ಲಿ ಕಾಫಿ ಮಂಡಳಿ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲೇ ಹಲವು ಕಾರಣ ಗಳಿಂದ ಕಂಗೆಟ್ಟಿರುವ ಕಾಫಿ ಬೆಳೆಗಾರರ ಬದುಕಿ ನೊಂದಿಗೆ ಕಾಫಿ ಮಂಡಳಿ ಚೆಲ್ಲಾಟವಾಡ ಬಾರದು. ಬೆಳೆಗಾರರ ಇಂದಿನ ಹೀನಾಯ ಸ್ಥಿತಿಯನ್ನು ಬಿಂಬಿಸುವಲ್ಲಿ ಕಾಫಿ ಮಂಡಳಿ ಸಂಪೂರ್ಣವಾಗಿ ವಿಫಲವಾಗಿದೆ. ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ತಯಾರಿಸಲಾದ ಕಾಫಿ ಬೆಳೆ ನಷ್ಟದ ಸಮೀಕ್ಷೆ ಸಂಪೂರ್ಣ ರೈತವಿರೋಧಿಯಾಗಿದೆ. ಬೆಳೆಗಾರರ ಬಗ್ಗೆ ಕಾಫಿ ಮಂಡಳಿ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ತೀವ್ರ ನಿರ್ಲಕ್ಷ್ಯತೋರುತ್ತಿದ್ದಾರೆ ಎಂದು ಬಿ.ಎನ್.ಪ್ರತ್ಯು ದೂರಿದರು.

ವೀರಾಜಪೇಟೆ ತಾಲೂಕಿನ 4 ಹೋಬಳಿಗಳ ಕೇವಲ 29 ಗ್ರಾಮಗಳಲ್ಲಿ ಮಾತ್ರ ಕಾಫಿ ಬೆಳೆಗೆ ಶೇ. 33% ಕ್ಕಿಂತ ಹೆಚ್ಚು ಹಾನಿ ಸಂಭವಿಸಿದೆ ಎಂದು ಕಾಫಿ ಮಂಡಳಿ ಅವೈಜ್ಞಾನಿಕ ವರದಿ ನೀಡಿದ್ದು, ಈ ಸಮೀಕ್ಷೆ ನಡೆಸಿದಾಗ ಅನುಸರಿಸಿದ ಮಾನದಂಡಗಳೇನು ಎಂದು ಅವರು ಪ್ರಶ್ನಿಸಿದ್ದಾರೆ.

ಕಳೆದ 3 ವರ್ಷಗಳಿಂದ ವೀರಾಜಪೇಟೆ ತಾಲೂಕಿನಲ್ಲಿ ನಿರಂತರವಾಗಿ ಎದುರಾದ ಅತಿವೃಷ್ಟಿಯಿಂದ ಬೆಳೆಗಾರರು ತೀವ್ರವಾಗಿ ಕಂಗಾಲಾಗಿದ್ದಾರೆ. ಈ ಮಧ್ಯೆ ತಾಲೂಕಿನಾದ್ಯಂತವಿರುವ ವನ್ಯಜೀವಿಗಳ ಅನಿಯಂತ್ರಿತ ಉಪಟಳ ದಿನೇ ದಿನೇ ಬೆಳಗಾರರನ್ನು ಮತ್ತು ಕೃಷಿ ಕಾರ್ಮಿಕರನ್ನು ಮತ್ತಷ್ಟು ತೊಂದರೆಗೆ ತಳ್ಳುತ್ತಿದೆ. ಆದರೂ ಸರಕಾರ ಮಾತ್ರ ಬೆಳಗಾರರ ಬಗ್ಗೆ ಕರುಣೆ ತೋರಿಸುತ್ತಿಲ್ಲ. ಕಾಫಿ ಕೃಷಿ ಸಂಬಂಧಿತ ಎಲ್ಲಾ ಮೂಲಭೂತ ವೆಚ್ಚಗಳು ಏರಿಕೆಯಾಗುತ್ತಿದ್ದರೂ ಕಾಫಿಯ ಮಾರಾಟ ಬೆಲೆ ಮಾತ್ರ ಕಳೆದ ಹಲವಾರು ವರ್ಷಗಳಿಂದ ಏರಿಕೆಯಾಗಿಲ್ಲ. ಮರು ಸರ್ವೆ ನಡೆಸಿ ತಾಲೂಕಿನ ಎಲ್ಲಾ ಅರ್ಹ ಬೆಳೆಗಾರರಿಗೆ ಸೂಕ್ತ ಪರಿಹಾರವನ್ನು ತ್ವರಿತಗತಿಯಲ್ಲಿ ವಿತರಿಸದಿದ್ದರೆ ತಾಲೂಕಿನ ಎಲ್ಲಾ ನೊಂದ ಬೆಳೆಗಾರರನ್ನು ಸಂಘಟಿಸಿ ಕಾಫಿ ಮಂಡಳಿ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇಲ್ಲಿಯೂ ನ್ಯಾಯ ದೊರೆಯದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಸರಕಾರದ ಗಮನ ಸೆಳೆಯಲಾಗುವುದು ಎಂದು ಪ್ರತ್ಯು ಹೇಳಿದ್ದಾರೆ.