ವೀರಾಜಪೇಟೆ, ಸೆ. 8: ಸ್ವಚ್ಛ ಭಾರತ್ ಮಿಷನ್ ಅನುದಾನದಡಿ ಯಲ್ಲಿ ಘನ ತ್ಯಾಜ್ಯ ವಿಸ್ತøತ ಯೋಜನೆಯ ಅನುಷ್ಠಾನದಡಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೆರುಂಬಾಡಿ ಕಸ ವಿಲೇವಾರಿ ಘಟಕದಲ್ಲಿ ಘನತ್ಯಾಜ್ಯ ನಿರ್ವಹಣೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಘನ ತ್ಯಾಜ್ಯ ನಿರ್ವಹಣೆಯ ವಿಸ್ತøತ ಯೋಜನೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಸರಕಾರ ಮೂರು ಕೋಟಿ ಮೂವತ್ತ ನಾಲ್ಕು ಲಕ್ಷ ಹಣವನ್ನು ಮಂಜೂರು ಮಾಡಿದ್ದು ಈಗಿನ ಪೆರುಂಬಾಡಿ ಕಸ ವಿಲೇವಾರಿ ಘಟಕದಲ್ಲಿ ಸುಮಾರು 45 ಲಕ್ಷ ಹಣದಲ್ಲಿ ಕಾಂಪೌಂಡ್ ವಾಲ್, ಶೌಚಾಲಯ, ಚರಂಡಿ, ರಸ್ತೆ, ವಾಚ್‍ಮೆನ್ ಶೆಡ್ ನಿರ್ಮಾಣ, ಸಿ.ಸಿ. ಕ್ಯಾಮೆರಾವನ್ನು ಅಳವಡಿಸಲಾಗಿದೆ. ಒಣ ಹಾಗೂ ಹಸಿ ಕಸ ಸಂಗ್ರಹಿಸಿ ಸಂಸ್ಕರಿಸುವ ಪ್ರತ್ಯೇಕವಾದ ವಿಶಾಲವಾದ ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿದೆ.

ಒಣ ಹಾಗೂ ಹಸಿ ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿದ ನಂತರ ಸಂಸ್ಕರಿಸಿ ಉಳಿದ ಆಯ್ದ ಭಾಗವನ್ನು ಪ್ಯಾಕ್ ಮಾಡಿ ಸದ್ಬಳಕೆ ಮಾಡಿಕೊಳ್ಳುವ ಕಾರ್ಖಾನೆಗಳಿಗೆ ಬೇಡಿಕೆಗೆ ತಕ್ಕಂತೆ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು. ಪಟ್ಟಣದ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಕಸ ವಿಲೇವಾರಿ ಮಾಡುವಾಗ ಪ್ಲಾಸ್ಟಿಕ್ ಅನ್ನು ಬಳಸದೆ ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸ ಬೇಕು. ಇದರಿಂದ ಒಣ, ಹಸಿ ಕಸ ಸಂಸ್ಕರಣೆಗೆ ಅನುಕೂಲವಾಗಲಿದೆ. ಕಸ ಸಂಸ್ಕರಣೆಯ ಕಾರ್ಯಕ್ಕಾಗಿ ಯೋಜನೆಯಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಖರೀದಿಸಲು ರೂ. 1.5 ಕೋಟಿ ಮೀಸಲಿಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಅಭಿಯಂತರ ಎಂ.ಪಿ. ಹೇಮ್‍ಕುಮಾರ್ ತಿಳಿಸಿದರು.

ಸುಮಾರು ಐದು ಎಕರೆ ಜಾಗವನ್ನೊಳಗೊಂಡಿರುವ ಪೆರುಂಬಾಡಿ ಕಸ ವಿಲೇವಾರಿ-ಆಧುನಿಕ ಕಸ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಒಂದು ತಿಂಗಳಾಗಿದ್ದು ಮುಂದಿನ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಯೋಜನೆಯ ಎಲ್ಲ ಕಾಮಗಾರಿಗಳು ಮುಕ್ತಾಯಗೊಂಡು ಒಣ ಹಾಗೂ ಹಸಿ ಕಸ ಸಂಸ್ಕರಣೆ ಆರಂಭವಾಗಲಿದೆ.

ಕೊಡಗು-ಕೇರಳವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಿಂದ ಅನತಿ ದೂರದಲ್ಲಿರುವ ಪೆರುಂಬಾಡಿ ಕಸ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಯನ್ನು ಯೋಜನೆಯ ಜಿಲ್ಲಾ ಅಭಿಯಂತರ ಶಿವಾನಂದ, ಸಹಾಯಕ ಕಾರ್ಯಪಾಲಕ ನಟರಾಜ್, ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಎಂ.ಪಿ. ಹೇಮ್‍ಕುಮಾರ್ ಭೇಟಿ ನೀಡಿ ಕಾಮಗಾರಿ ಪ್ರಗತಿಯ ಕುರಿತು ಪರಿಶೀಲನೆ ನಡೆಸಿದರು.ಸುಮಾರು ಐದು ಎಕರೆ ಜಾಗವನ್ನೊಳಗೊಂಡಿರುವ ಪೆರುಂಬಾಡಿ ಕಸ ವಿಲೇವಾರಿ-ಆಧುನಿಕ ಕಸ ಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಒಂದು ತಿಂಗಳಾಗಿದ್ದು ಮುಂದಿನ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಯೋಜನೆಯ ಎಲ್ಲ ಕಾಮಗಾರಿಗಳು ಮುಕ್ತಾಯಗೊಂಡು ಒಣ ಹಾಗೂ ಹಸಿ ಕಸ ಸಂಸ್ಕರಣೆ ಆರಂಭವಾಗಲಿದೆ.

ಕೊಡಗು-ಕೇರಳವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಿಂದ ಅನತಿ ದೂರದಲ್ಲಿರುವ ಪೆರುಂಬಾಡಿ ಕಸ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿಯನ್ನು ಯೋಜನೆಯ ಜಿಲ್ಲಾ ಅಭಿಯಂತರ ಶಿವಾನಂದ, ಸಹಾಯಕ ಕಾರ್ಯಪಾಲಕ ನಟರಾಜ್, ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಎಂ.ಪಿ. ಹೇಮ್‍ಕುಮಾರ್ ಭೇಟಿ ನೀಡಿ ಕಾಮಗಾರಿ ಪ್ರಗತಿಯ ಕುರಿತು ಪರಿಶೀಲನೆ ನಡೆಸಿದರು.