ಮಡಿಕೇರಿ, ಸೆ. 8: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು ಮೃತಪಟ್ಟವರ ಸಂಖ್ಯೆ 24ಕ್ಕೇರಿದೆ. ಗೋಣಿಕೊಪ್ಪ ನಿವಾಸಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ಪುರುಷರೊಬ್ಬರಿಗೆ ತಾ. 2 ರಂದು ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಐ.ಸಿ.ಯು.ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತಾ. 8 ರಂದು ಬೆಳಿಗ್ಗೆ 8.45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಹೊಸದಾಗಿ 24 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1765 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1420 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 24 ಮಂದಿ ಮೃತಪಟ್ಟಿದ್ದು, 321 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 89 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 60 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 172 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 294 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಸೋಮವಾರಪೇಟೆ ಯಡೂರುವಿನ ಮಾವಿನಕಟ್ಟೆ ಬಳಿಯ 26 ವರ್ಷದ ಪುರುಷ, ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 26 ವರ್ಷದ ಪುರುಷ, ಮಡಿಕೇರಿ ರೋಟರಿ ಹಾಲ್ ಬಳಿಯ 39 ವರ್ಷದ ಪುರುಷ, ಮಡಿಕೇರಿ ಪುಟಾಣಿ ನಗರದ 59 ವರ್ಷದ ಪುರುಷ, ಕುಶಾಲನಗರ ಬಸವೇಶ್ವರ ಬಡಾವಣೆಯ 3ನೇ ಬ್ಲಾಕಿನ 23 ಮತ್ತು 85 ವರ್ಷದ ಮಹಿಳೆಯರು, ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ ಲಾಲಿ ಪೆಟಲ್ಸ್ ಹೋಂಸ್ಟೇಯ 41 ವರ್ಷದ ಪುರುಷ, ಸೋಮವಾರಪೇಟೆ ಬೆಳ್ಳೂರು ರಸ್ತೆಯ ವಿನಾಯಕ ರೈಸ್ ಮಿಲ್ ಬಳಿಯ 58 ವರ್ಷದ ಮಹಿಳೆ, ಸೋಮವಾರಪೇಟೆ ಐಗೂರು ಗ್ರಾಮ ಮತ್ತು ಅಂಚೆಯ 35 ವರ್ಷದ ಮಹಿಳೆ, 38 ವರ್ಷದ ಪುರುಷ, 55 ವರ್ಷದ ಮಹಿಳೆ ಮತ್ತು 17 ವರ್ಷದ ಬಾಲಕ, ವೀರಾಜಪೇಟೆ ಕೋತೂರು ಗ್ರಾಮ ಮತ್ತು ಅಂಚೆಯ ಮಾರಮ್ಮ ದೇವಾಲಯ ಬಳಿಯ 68 ವರ್ಷದ ಮಹಿಳೆ, 48 ಮತ್ತು 84 ವರ್ಷದ ಪುರುಷರು, ಸೋಮವಾರಪೇಟೆ ಶಾಂತಳ್ಳಿ ಗ್ರಾಮ ಮತ್ತು ಅಂಚೆಯ 56 ಮತ್ತು 27 ವರ್ಷದ ಮಹಿಳೆ, ಮಕ್ಕಂದೂರಿನ 61 ವರ್ಷದ ಪುರುಷ, ಮಡಿಕೇರಿ ವಿದ್ಯಾನಗರದ ಕೇಂದ್ರೀಯ ವಿದ್ಯಾಲಯ ಹತ್ತಿರದ 29 ವರ್ಷದ ಪುರುಷ, ವೀರಾಜಪೇಟೆ ಪಂಜರಪೇಟೆಯ 42 ವರ್ಷದ ಪುರುಷ, ಮಡಿಕೇರಿಯ ಅಖಿಲ ರವಿ ಆರ್ಯುವೇದ ಆಸ್ಪತ್ರೆ ಪೆನ್ಸನ್ ಲೈನ್ ಹತ್ತಿರ 24 ವರ್ಷದ ಪುರುಷ, ಕುಶಾಲನಗರ ಬಿ.ಎಂ.ರಸ್ತೆಯ ರೋಟರಿ ಕ್ಲಬ್ ಎದುರಿನ 43 ವರ್ಷದ ಮಹಿಳೆ, ಮಡಿಕೇರಿ ಮೈತ್ರಿ ಹಾಲ್ ಹತ್ತಿರದ ಪೊಲೀಸ್ ವಸತಿ ಗೃಹದ 59 ವರ್ಷದ ಪುರುಷ, ಕುಶಾಲನಗರ ಬಸವೇಶ್ವರ ಬಡಾವಣೆಯ 55 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.