ವೀರಾಜಪೇಟೆ, ಸೆ. 8: ವೀರಾಜಪೇಟೆ ಸಮೀಪದ ಕದನೂರು ಶ್ರೀ ಭಗವತಿ ದೇವಾಲಯದ ಆಡಳಿತ ಮಂಡಳಿಯ ಆಯ್ಕೆ ಇತ್ತೀಚೆಗೆ ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ಅಮ್ಮುಣಿಚಂಡ ಎನ್. ರವಿ ಉತ್ತಪ್ಪ ಚುನಾಯಿತರಾದರು.

ಉಪಾಧ್ಯಕ್ಷರಾಗಿ ಪಾಲೇಕಂಡ ಜೀವನ್ ಬೆಳ್ಳಿಯಪ್ಪ, ಕಾರ್ಯದರ್ಶಿಯಾಗಿ ಪೆಮ್ಮಂಡ ಕೆ.ಪ್ರಸಾದ್ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರುಗಳಾಗಿ ಕಾಣತಂಡ ಧನು ಬೋಪಣ್ಣ (ಜತೆ ಕಾರ್ಯದರ್ಶಿ), ಕಾಣತಂಡ ವಿವೇಕ್ (ಸಹ ಜತೆ ಕಾರ್ಯದರ್ಶಿ), ಪೊಯ್ಯೇಟ್ಟಿರ ಮಿಟ್ಟು ಚಂಗಪ್ಪ, ಮಾದಂಡ ಸತೀಶ್, ಪಾಲೇಕಂಡ ರಮೇಶ್ ನಂಜಪ್ಪ, ಕಾಳಮಂಡ ಉಮೇಶ್, ಅಮ್ಮುಣಿಚಂಡ ಮಣಿ ಮಾಚಯ್ಯ, ಅನ್ನರಕಂಡ ಸತ್ಯ ಸುಬ್ರಹ್ಮಣಿ, ಪೆಮ್ಮಂಡ ಸಿ. ಅಪ್ಪಣ್ಣ, ಕಾಣತಂಡ ಬಿ. ಮಂದಣ್ಣ ಹಾಗೂ ಕಾಣತಂಡ ಕವನ್ ಕಾವೇರಪ್ಪ ಆಯ್ಕೆಯಾಗಿದ್ದಾರೆ.