ಪೆರಾಜೆ, ಸೆ. 8: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ ಹಾಗೂ ಶ್ರೀ ಭಗವಾನ್ ಸಂಘ ಊರುಬೈಲು ಇವರ ಜಂಟಿ ಆಶ್ರಯದಲ್ಲಿ ಚೆಂಬು ಸಹಕಾರಿ ಭವನಗಳಲ್ಲಿ ನಡೆದ ಪ್ರಧಾನ ಮಂತ್ರಿಗಳ ಜನ್ ಆರೋಗ್ಯ ಯೋಜನೆಯ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಅಭಿಯಾನದ ಸಮಾರೋಪ ಸಮಾರಂಭ ಬಾಲಂಬಿಯಲ್ಲಿ ನಡೆಯಿತು.

ಪಯಸ್ವಿನಿ ಸಹಕಾರ ಸಂಘದ ಅಧ್ಯಕ್ಷ ಎನ್.ಸಿ. ಅನಂತ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಭಗವಾನ್ ಸಂಘದ ಅಧ್ಯಕ್ಷ ರವಿರಾಜ್ ಹೊಸೂರು ಸ್ವಾಗತಿಸಿದರು. ಈ ಸಂದರ್ಭ ನೋಂದಣಿ ಜವಾಬ್ದಾರಿ ನಿರ್ವಹಿಸಿದ ಕಲ್ಲುಗುಂಡಿ ಸ್ಪಾರ್ಟ್ ಕಂಪ್ಯೂಟರ್‍ನ ಕಿಶೋರ್‍ಕುಮಾರ್ ಅವರನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕ ದಿನೇಶ್ ಸಣ್ಣಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಎ.ಪಿ. ಶಶಿಧರ್ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರನ್ನು ಅಭಿನಂದಿಸಿದರು.

ಸಭೆಯಲ್ಲಿ ಎರಡೂ ಸಂಘಗಳ ನಿರ್ದೇಶಕರು, ಸದಸ್ಯರು, ಫಲಾನುಭವಿಗಳು, ಕಂಪ್ಯೂಟರ್ ಸಿಬ್ಬಂದಿಗಳು, ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.