ಗೋಣಿಕೊಪ್ಪಲು, ಸೆ. 7: ತನ್ನ ಸಮಾಜದ ಉದ್ದಾರಕ್ಕಾಗಿ ತನ್ನ ಬದುಕನ್ನೇ ಮುಡುಪಾಗಿಟ್ಟ ಮಹಾನ್ ಚೇತನ ಬ್ರಹ್ಮಶ್ರೀ ಶ್ರೀನಾರಾಯಣ ಗುರು ಜಯಂತಿ ಆಚರಣೆ ಇಂದು ನಾಗರಿಕ ಸಮಾಜಕ್ಕೆ ಸ್ಪೂರ್ತಿದಾಯಕ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅಭಿಪ್ರಾಯ ಪಟ್ಟರು. ಗೋಣಿಕೊಪ್ಪಲುವಿನ ರಾಧಾ ಟೂರಿಸ್ಟ್ ಹೋಂನ ಸಭಾಂಗಣದಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಕೆ.ರಾಜೇಶ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ಶ್ರೀನಾರಾಯಣ್ ಗುರು ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀನಾರಾಯಣ ಗುರು ಅವರು ಸಮಾಜದಲ್ಲಿ ಅಸ್ಪøಶ್ಯತೆ ಹೋಗಲಾ ಡಿಸಲು ಶ್ರಮಿಸಿದರು ಎಂದರಲ್ಲದೆ, ಬಿಜೆಪಿ ಪಕ್ಷದಲ್ಲಿ ಯಾವುದೇ ಆಂತರಿಕ ವಿಚಾರಗಳಿದ್ದರೂ ಇದು ಪಕ್ಷದ ಚೌಕಟ್ಟಿನಲ್ಲಿಯೇ ಚರ್ಚೆ ಆಗಬೇಕು. ಸರಿ ತಪ್ಪುಗಳನ್ನು ಹಿರಿಯರ ಮುಂದೆ ಇತ್ಯರ್ಥಪಡಿಸಬೇಕು.ಬಹಿರಂಗವಾಗಿ ಎಲ್ಲಿಯೂ ಕೂಡ ಚರ್ಚೆಗೆ ಅವಕಾಶ ನೀಡಬಾರದಾಗಿ ದೇವಯ್ಯ ಕಾರ್ಯ ಕರ್ತರಿಗೆ ಕಿವಿ ಮಾತನಾಡಿದರು.

ವೀರಾಜಪೇಟೆ ಮಂಡಲ ಬಿಜೆಪಿಯ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀನಾರಾಯಣ ಗುರು ಅವರ ಆದರ್ಶ ಗುಣಗಳನ್ನು ಬಿಜೆಪಿ ಪಕ್ಷದ ಪ್ರತಿ ಕಾರ್ಯಕರ್ತನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ವಿಚಾರ ಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ್, ಶ್ರೀ ಗುರುಗಳು ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದು ನೀಡಿದ ಸಂದೇಶ ಪ್ರಸ್ತುತ ಪರಿಸ್ಥಿತಿಗೆ ಹೊಂದುತ್ತಿದ್ದು, ಮನುಷ್ಯ ವಿದ್ಯಾವಂತನಾದಾಗ ಮಾತ್ರ ಪ್ರಬುದ್ದ ವ್ಯಕ್ತಿಯಾಗಲು ಸಾಧ್ಯ ಎಂದರು.

ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಆನಂದ್ ರಘು ಮಾತನಾಡಿ ಬಿಜೆಪಿ ಪಕ್ಷದಲ್ಲಿ ಹಿಂದುಳಿದ ವರ್ಗದ ಜನತೆಗೆ ಉತ್ತಮ ಸ್ಥಾನ ಮಾನಗಳನ್ನು ನೀಡುವ ಮೂಲಕ ಪಕ್ಷ ಉತ್ತಮವಾಗಿ ನಡೆಸಿಕೊಳ್ಳುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಇನ್ನು ಸದೃಢವಾಗಿ ಬೆಳೆಸುವ ಜವಾಬ್ದಾರಿ ಕಾರ್ಯಕರ್ತರಲ್ಲಿದೆ ಎಂದರು. ಸಭೆಯನ್ನು ಉದ್ದೇಶಿಸಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಬಿಲ್ಲವ ಸಮಾಜದ ಅಧ್ಯಕ್ಷ ಗಣೇಶ್, ಜಯಲಕ್ಷ್ಮಿ ಜ್ಯುವೆಲ್ಲರಿ ಮಾಲೀಕರಾದ ಎಂ.ಜಿ.ಮೋಹನ್, ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಒಬಿಸಿ ನಗರ ಘಟಕದ ಅಧ್ಯಕ್ಷರಾದ ಸತೀಶ್,ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ ಉತ್ತಯ್ಯ, ಮುಂತಾದವರು ಉಪಸ್ಥಿತರಿದ್ದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ,ಜಿಲ್ಲಾ ಖಜಾಂಚಿ ಚೆಪ್ಪುಡೀರ ಮಾಚು,ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ,ತಾಲೂಕು ಉಪಾಧ್ಯಕ್ಷ ಕುಪ್ಪಂಡ ಗಿರಿ ಪೂವಣ್ಣ,ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ,ರಘು ಸೇರಿದಂತೆ ಪಕ್ಷದ ಗಣ್ಯರು ಹಾಜರಿದ್ದರು. ಬಿಜೆಪಿ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಸುಬ್ರಮಣಿ ಸ್ವಾಗತಿಸಿದರು. ಸೌಮ್ಯ ನಾಗೇಶ್ ಪ್ರಾರ್ಥಿಸಿದರು, ಶ್ರೀಮಂಗಲ ಒಬಿಸಿ ಅಧ್ಯಕ್ಷ ಸತೀಶ್ ವಂದಿಸಿದರು.