ಮಡಿಕೇರಿ, ಸೆ. 7 : ಜಿಲ್ಲೆಯಲ್ಲಿ 17 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1741 ಪ್ರಕರಣಗಳು ವರದಿಯಾಗಿದ್ದು, 1409 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 23 ಮಂದಿ ಸಾವನ್ನಪ್ಪಿದ್ದು, 309 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 84 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 59 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 166 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ 286 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಚೇರಂಬಾಣೆ ಕೊಳಗದಾಳುವಿನ 63 ವರ್ಷದ ಪುರುಷ, ಮಾದಾಪುರದ ಎಸ್.ಎಂ.ಸಿ.ಲೇಔಟಿನ ಜಂಬೂರುಬಾಣೆಯ 62 ವರ್ಷದ ಮಹಿಳೆ, ಬಾಳೆಲೆಯ ಗಂಧದಗುಡಿ ಕಾಲೋನಿಯ 27 ವರ್ಷದ ಪುರುಷ, ವೀರಾಜಪೇಟೆ ಮಹಿಳಾ ಸಮಾಜ ಬಳಿಯ ರೋಟರಿ ಶಾಲೆ ಎದುರಿನ 59 ವರ್ಷದ ಪುರುಷ, ವೀರಾಜಪೇಟೆ ಚರ್ಚ್ ರಸ್ತೆಯ ಕಾನ್ವೆಂಟ್ ಬಳಿಯ 71 ವರ್ಷದ ಪುರುಷ, ಸಿದ್ದಾಪುರ ಗ್ರಾಮದ ಕೆನರಾ ಬ್ಯಾಂಕ್ ಎದುರಿನ 63 ವರ್ಷದ ಪುರುಷ, ಮಾಲ್ದಾರೆ ಅಂಚೆಯ ಗುಡ್ಲೂರು ಶಾಲೆ ಬಳಿಯ 33 ವರ್ಷದ ಪುರುಷ, ವೀರಾಜಪೇಟೆ ಲೋಕೋಪಯೋಗಿ ವಸತಿಗೃಹದ 28 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 48 ವರ್ಷದ ಪುರುಷ, ಪಾಲಿಬೆಟ್ಟ ಕಲ್ಲುಕೊರೆಯ ಗಣಪತಿ ದೇವಾಲಯ ಬಳಿಯ 76 ವರ್ಷದ ಮಹಿಳೆ, ಪಾಲಿಬೆಟ್ಟ ಟಾಟಾ ಕಾಫೀ ಎಸ್ಟೇಟಿನ ಹೊಸಹಳ್ಳಿ ವಸತಿಗೃಹದ 30 ವರ್ಷದ ಪುರುಷ, ಕುಶಾಲನಗರ ಬಿಎಂ ರಸ್ತೆಯ ರೋಟರಿ ಕ್ಲಬ್ ಎದುರಿನ 73 ವರ್ಷದ ಪುರುಷ ಮತ್ತು 17 ವರ್ಷದ ಬಾಲಕಿ, ವೀರಾಜಪೇಟೆ ಚಿಕ್ಕಮಂಡೂರು ಗ್ರಾಮ ಮತ್ತು ಅಂಚೆಯ ಅಚ್ಚುನಾಯಕ ದೇವಾಲಯ ಬಳಿಯ 40 ವರ್ಷದ ಪುರುಷ, ನೆಲ್ಲಿಹುದಿಕೇರಿಯ ಚರ್ಚ್ ಸೈಡಿನ 11 ವರ್ಷದ ಬಾಲಕ, ಕುಶಾಲನಗರದ ಬಸವೇಶ್ವರ ಬಡಾವಣೆಯ ಜನತಾ ಕಾಲೋನಿಯ 19 ವರ್ಷದ ಪುರುಷ, ಸುಂಟಿಕೊಪ್ಪ ಕೂರ್ಗಳ್ಳಿ ಎಸ್ಟೇಟ್ ವಸತಿಗೃಹದ 53 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.