ಮಡಿಕೇರಿ, ಸೆ. 6: ತ್ರಿಭಾಷಾ ಸಾಹಿತಿಗಳಾದ ಐಚೆಟ್ಟಿರ ಮುತ್ತಣ್ಣ ಹಾಗೂ ಬಾಚಮಾಡ ಗಣಪತಿ ಅವರ ನೂರನೇ ಜನ್ಮ ದಿನಾಚರಣೆಯ ಅಂಗವಾಗಿ, ಕೊಡವಾಮೆರ ಕೊಂಡಾಟ ಕೂಟದ ವತಿಯಿಂದ ತಿಂಗಳಿಗೊಂದು ಸಾಹಿತ್ಯ ಸ್ಪರ್ಧೆಯ ನಾಲ್ಕನೇ ಭಾಗವಾಗಿ ಕೊಡವ ಐಲಾಟ(ತಮ್ಸಾÉ) ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ಅಂತರ್ಜಾಲದ ವಾಟ್ಸಾಪ್ ಮೂಲಕ ನಡೆಯುವ ಈ ಸ್ಪರ್ಧೆಯಲ್ಲಿ, ಜಾತಿ ಧರ್ಮ, ವಯಸ್ಸಿನ ಮಿತಿಯಿಲ್ಲದಂತೆ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಕೊಡವ ಭಾಷೆಯಲ್ಲಿಯೇ 75 ಸಾಲು ಮೀರದಂತೆ ತಮ್ಮ ತಮಾಷೆಯ ಬರಹವನ್ನು ವಾಟ್ಸಾಪ್‍ನಲ್ಲಿ ಇಲ್ಲವೇ ಅಂದವಾಗಿ ಬರೆದು ಫೆÇೀಟೋ ತೆಗೆದು ತಾ. 25ರ ರಾತ್ರಿ ಹತ್ತು ಗಂಟೆಯ ಒಳಗಾಗಿ 9480578796 ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು.
ವಿಜೇತರಿಗೆ ಪ್ರಥಮ 2000 ದ್ವಿತೀಯ 1000 ಹಾಗೂ ತೃತೀಯ 500 ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರ, ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು. ನಾಲ್ಕನೇ ತಿಂಗಳ ಬಹುಮಾನವನ್ನು ನಿವೃತ್ತ ಶಿಕ್ಷಕಿ, ಕೊಡವಾಮೆರ ಕೊಂಡಾಟ ಕೂಟದ ಸದಸ್ಯೆ ಅಣ್ಣಿರ ಜೂಬಿ ಬಿದ್ದಯ್ಯ ಅವರು ಪ್ರಾಯೋಜಿಸಿದ್ದಾರೆ ಎಂದು ತಿಳಿಸಿದ್ದಾರೆ.