ಕಣಿವೆ, ಸೆ. 6: ಹುಣ್ಣಿಮೆಯ ಅಂಗವಾಗಿ ಕಾವೇರಿ ನದಿ ದಂಡೆಯ ಮೇಲಿರುವ ಕಾವೇರಿ ಮಾತೆ ಪ್ರತಿಮೆಗೆ ಹುಣ್ಣಿಮೆ ಪೂಜೆಯನ್ನು ನೆರವೇರಿಸ ಲಾಯಿತು. ಕುಶಾಲನಗರದ ಚೌಡೇಶ್ವರಿ ದೇಗುಲದ ಪ್ರಧಾನ ಅರ್ಚಕ ಪ್ರಸನ್ನಭಟ್ ಪೂಜಾ ವಿಧಿ ನೆರವೇರಿಸಿದರು.
ಎಸ್ಎಲ್ಎನ್ ಕಾಫಿ ಸಂಸ್ಥೆಯ ವೆಂಕಟಾಛಲಪತಿ, ಕನ್ನಡ ಸಂಘದ ಪದಾಧಿಕಾರಿ ಗಳಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್ ಹಾಗೂ ವಿಜಯೇಂದ್ರ ಪ್ರಸಾದ್ ಇದ್ದರು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.