ಮಡಿಕೇರಿ, ಸೆ. 6: ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರೋಗ್ಯ ಹಸ್ತ ಕಿಟ್ಟನ್ನು ವಾರ್ಡ್ ಸಂಖ್ಯೆ 14ರ ದರ್ಜಿ ಬೀದಿಯ ಕೊರೊನಾ ವಾರಿಯರ್ಸ್ ಆದ ಕಾರ್ತಿಕ್ ಜಿ. ಚೆಟ್ಟಿಯಾರ್ ಅವರಿಗೆ ಎ.ಐ.ಸಿ.ಸಿ. ಕಾರ್ಯದರ್ಶಿ ಬಿ.ಎಂ. ಸಂದೀಪ್ ಅವರ ಮುಖಾಂತರ ವಾರ್ಡ್ನ ಎಲ್ಲಾ ಕೊರೊನಾ ವಾರಿಯರ್ಸ್ಗಳಿಗೆ ನೀಡಲಾಯಿತು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ, ವಕ್ತಾರ ರೂಬೇನ್ ಮೊಸಸ್, ಸೇವಾದಳ ಅಧ್ಯಕ್ಷ ಸಿಲ್ವೆಸ್ಟರ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್, ಘಟಿತ ಅಧ್ಯಕ್ಷ ರಸೂಲ್, ಕಾರ್ಮಿಕ ಅಧÀ್ಯಕ್ಷ ನಯಾ, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಅದೀಲ್ ಹಾಜರಿದ್ದರು.