ಸುಂಟಿಕೊಪ್ಪ, ಸೆ. 6: ಇತ್ತೀಚಿಗೆ ಮೈಸೂರಿನ ಚಾಮುಂಡಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಯುವ ಜನ ಸಬಲೀಕರಣ ಹಾಗೂ ನೆಹರೂ ಕೇಂದ್ರ ಹಾಕಿ ಮೈಸೂರು ವಿಎಸ್‍ಐ ಸಂಯುಕ್ತ ಆಶ್ರÀಯದಲ್ಲಿ ಹಾಕಿ ಮಾಂತ್ರಿಕ ದ್ಯಾನ್‍ಚಂದ್ ಜನ್ಮ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಕಾಫಿ ಬೆಳೆಗಾರ, ರಾಷ್ಟ್ರೀಯ ಹಾಕಿ ತಂಡದ ಹಿರಿಯ ಆಟಗಾರÀರಾಗಿದ್ದ ಮಾಳೆಯಂಡ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮೈಸೂರು ವಿಶ್ವ ವಿದ್ಯಾನಿಲಯದ ಸಹಾಯಕ ನಿರ್ದೇಶಕ ಡಾ. ಪುಲಿಕೇಶಿ, ಮೈಸೂರು ಹಾಕಿ ಸಂಸ್ಥೆಯ

ಅಧ್ಯಕ್ಷ ಕೊಂಗಾಂಡ ದಿಲೀಪ್, ಉಪಾಧ್ಯಕ್ಷ ಕೊಟೇರ ಮುದ್ದಯ್ಯ, ಸಮಿತಿ ಸದಸ್ಯರಾದ ಮಾದಪ್ಪಂಡ ಅಪ್ಪಚ್ಚು ಹಾಗೂ ಕೋದಂಡ

ಸತೀಶ ಸೇರಿದಂತೆ ಇತರರು ಹಾಜರಿದ್ದರು.