ಸೋಮವಾರಪೇಟೆ, ಸೆ.6: ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದ ಪಟ್ಟಣದ ಮಹದೇಶ್ವರ ಬಡಾವಣೆ ನಿವಾಸಿ, ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ ಗಾನಾಳನ್ನು ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಗಾನಾಳ ಮನೆಗೆ ತೆರಳಿದ ಸಂಘಟನೆಯ ಪ್ರಮುಖರು, ವಿದ್ಯಾರ್ಥಿನಿಯನ್ನು ಸನ್ಮಾನಿಸಿದರು.
ಸಂಘಟನೆಯ ಅಧ್ಯಕ್ಷ ಕೆ.ಕೆ. ಹರೀಶ್ ಕುಮಾರ್, ಕಾರ್ಯದರ್ಶಿ ರಾಜನ್, ಪದಾಧಿಕಾರಿಗಳಾದ ಸುಕುಮಾರ್, ಶ್ರೀಧರ್, ಕೆ.ಕೆ. ಮಹೇಶ್ ಕುಮಾರ್, ಎನ್.ಎನ್. ದಯಾನಂದ್, ಗಾನಾಳ ಪೆÇೀಷಕರಾದ ಸುಜಿತ್ ಮತ್ತು ಸೀಮಾ ಅವರುಗಳು ಉಪಸ್ಥಿತರಿದ್ದರು.