ಶನಿವಾರಸಂತೆ, ಸೆ. 6: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಯಳ್ಳಿ ಗ್ರಾಮದ ಸ.ನಂ. 47ರ 1.70 ಎಕರೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಈ ಜಾಗದಲ್ಲಿ 30-35 ವರ್ಷದಿಂದ ಕಾಫಿ ಬೇಸಾಯ ಮಾಡಲಾಗಿತ್ತು. ಈ ಸಂದರ್ಭ ತಹಶೀಲ್ದಾರ್ ಗೋವಿಂದ್‍ರಾಜ್, ಕಂದಾಯ ಪರಿವೀಕ್ಷಕ ನಂದಕುಮಾರ್, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಸಂತೋಷ್, ಗ್ರಾಮ ಸಹಾಯಕ ಹೂವಯ್ಯ, ಪಿಡಿಒ ಸುಮೇಶ್ ಹಾಗೂ ತಾಲೂಕು ಸರ್ವೆ ಅಧಿಕಾರಿ ಪಾಟೀಲ್ ಹಾಜರಿದ್ದರು.