ಸೋಮವಾರಪೇಟೆ, ಸೆ. 6: ಇಲ್ಲಿನ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ಎ.ಕೆ. ಸುಬ್ಬಯ್ಯ ಅಭಿಮಾನಿಗಳ ಬಳಗದಿಂದ ಸ್ಥಳೀಯ ಅಂಬೇಡ್ಕರ್ ಭವನದಲ್ಲಿ ಹಿರಿಯ ರಾಜಕಾರಣಿ ದಿ. ಎ.ಕೆ. ಸುಬ್ಬಯ್ಯ ಅವರ ಸ್ಮರಣೆ ನಡೆಯಿತು.
ಪ್ರಮುಖ ಜಯಪ್ಪ ಹಾನಗಲ್ಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಕೀಲ ಬಿ.ಈ. ಜಯೇಂದ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಚ್.ಎ. ನಾಗರಾಜು, ರವೀಶ್, ಅಬ್ಬಾಸ್, ಎಸ್.ಆರ್. ವಸಂತ್, ಮಹಮ್ಮದ್ ಇಮ್ರಾನ್, ಜಮೀರ್ ಖಾನ್ ಮತ್ತಿತರರು ಪಾಲ್ಗೊಂಡಿದ್ದರು.