ಸೋಮವಾರ ಪೇಟೆ, ಸೆ. 6: ಸೋಮವಾರ ಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂಜುಂಡೇಗೌಡ ಅವರನ್ನು ಪೊಲೀಸ್ ಇಲಾಖೆಯ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.

ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದ ಸಂಕಪ್ಪ ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ವೈ.ಎಸ್.ಪಿ. ಶೈಲೇಂದ್ರ ಅವರು, ಪೊಲೀಸ್ ಇಲಾಖೆಯಲ್ಲಿ, ಕರ್ತವ್ಯ ನಿರ್ವಹಿಸುವದು ಕಷ್ಟಕರ. ಆದರೆ ನಂಜುಂಡೇಗೌಡ ಅವರು, ವೃತ್ತ ನಿರೀಕ್ಷಕರಾಗಿ ಕೊರೊನಾ ಸಂದರ್ಭ ಸೇರಿದಂತೆ ಇತರ ಸಮಯದಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೃತ್ತ ನಿರೀಕ್ಷಕ ನಂಜುಂಡೇಗೌಡ, ಸೋಮವಾರಪೇಟೆ ತಾಲೂಕು ಸೇರಿದಂತೆ ಕೊಡಗಿನ ಅನೇಕ ಪ್ರದೇಶಗಳಲ್ಲಿ ಭೂಕುಸಿತ, ಜಲಪ್ರಳಯ, ನೆರೆಯಿಂದಾಗಿ ಜನತೆ ಸಂಕಷ್ಟದಲ್ಲಿದ್ದಾಗ ಕೆಲಸ ನಿರ್ವಹಿಸಿರುವದು ತೃಪ್ತಿ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕುಶಾಲನಗರ ವೃತ್ತದ ಆರಕ್ಷಕ ನಿರೀಕ್ಷಕ ಮಹೇಶ್, ಡಿಎಸ್‍ಬಿಯ ನಿರೀಕ್ಷಕ ಮೇದಪ್ಪ, ಮಡಿಕೇರಿ ಗ್ರಾಮಾಂತರ ವಿಭಾಗದ ವೃತ್ತ ನಿರೀಕ್ಷಕ ದಿವಾಕರ್, ಠಾಣಾಧಿಕಾರಿಗಳಾದ ಹರೀಶ್, ನಂದೀಶ್‍ಕುಮಾರ್, ವೆಂಕಟರಮಣ, ದೇವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿ ಮಧು ಕಾರ್ಯಕ್ರಮ ನಿರ್ವಹಿಸಿದರು.