ಸಿದ್ದಾಪುರ, ಸೆ. 6: ಭಾರೀ ಮೌಲ್ಯದ ಬೀಟೆ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಮಿಂಚಿನ ಧಾಳಿ ನಡೆಸಿ ಮರದ ನಾಟಾಗ ಳೊಂದಿಗೆ ಲಾರಿ ಸಮೇತ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಾಲ್ನೂರು - ತ್ಯಾಗತ್ತೂರು ಗ್ರಾಮದ ನಿವಾಸಿ, ರಾಜೇಶ್ ಎಂಬವರಿಗೆ ಸೇರಿದ ಕಾಫಿ ತೋಟ ದಿಂದ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಬೀಟೆ ಮರಗಳನ್ನು ಭಾನುವಾರ ಬೆಳಗ್ಗಿನ ಜಾವ ಲಾರಿ (ಕೆ.ಎ.13 ಬಿ. 1551) ಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡಲು ಯತ್ನಿಸುವ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿ ಕಾರಿ ಅನನ್ಯಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಈ ಸಂದರ್ಭ ತೋಟದ ಮಾಲೀಕ ರಾಜೇಶ್ ಮನೆಯ ಆವರಣದಲ್ಲಿ ಲಾರಿ ಸಮೇತ ಅಂದಾಜು 20 ಲಕ್ಷ ಮೌಲ್ಯದ ಬೀಟೆ ಮರಗಳ ನಾಟಾಗಳನ್ನು ಲಾರಿಯೊಂದಿಗೆ ವಶಪಡಿಸಿಕೊಳ್ಳಲಾಯಿತು. ಅಲ್ಲದೇ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಫರೂಕ್ (32) ಎಂಬಾತ ನನ್ನು ಬಂಧಿಸಲಾಗಿದೆ. ಧಾಳಿಯ ಸಂದರ್ಭ ತೋಟದ ಮಾಲೀಕ ರಾಜೇಶ್ ಹಾಗೂ ಲಾರಿ ಮಾಲೀಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿಯಾಗಿರುವ ಇಸ್ಮಾಯಿಲ್ ಬ್ಯಾರಿ ಹಾಗೂ ಆರೋಪಿಗಳಾದ ನೆಲ್ಯಹುದಿಕೇರಿಯ ಎಂ.ಜಿ. ಕಾಲೋನಿ ನಿವಾಸಿ ಪಿ.ಎನ್. ರಂಶದ್, ನಲ್ವತ್ತೇಕರೆ ನಿವಾಸಿ ಅಬೂ, ಇಂಜಿಲಗೆರೆಯ ಸಫೀಕ್ ಹಾಗೂ ಇತರರು ತಲೆಮರೆಸಿಕೊಂಡಿದ್ದಾರೆ.

ಮಡಿಕೇರಿ ವಿಭಾಗದ ಡಿಎಫ್‍ಓ ಪ್ರಭಾಕರ್ ಹಾಗೂ ಎಸಿಎಫ್ ನೆಹರು ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಸಿಬ್ಬಂದಿಗಳಾದ ಚರಣ್, ಜಗದೀಶ್, ಅಪ್ಪಸ್ವಾಮಿ, ದುರ್ಗೇಶ್, ತಿಲಕ್, ಅಶೋಕ್, ಚಾಲಕ ವಾಸುದೇವ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.