ಮಡಿಕೇರಿ, ಸೆ. 6: ದಕ್ಷಿಣ ಕೊಡಗಿನ ಬೆಸಗೂರು ಗ್ರಾಮದಲ್ಲಿ ಕೀರೆಹೊಳೆಯ ನೀರಿನಲ್ಲಿ ಚೆಲ್ಲಾಟವಾಡುತ್ತಿರುವ ಅಪರೂಪದ ನೀರು ನಾಯಿಗಳು ಕಾಣಿಸಿಕೊಂಡಿವೆ. ಈ ಅಪರೂಪದ ದೃಶ್ಯವನ್ನು ಅಲ್ಲಿನ ನಿವಾಸಿ ಬಾಚಮಾಡ ಶರಣು ಭೀಮಯ್ಯ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭೀಮಯ್ಯ ಅವರ ಗದ್ದೆಗಳ ನಡುವೆ ಹರಿಯುವ ಕೀರೆಹೊಳೆ ನದಿ ಪಾತ್ರದಲ್ಲಿ ನೀರು ನಾಯಿಗಳ ಚೀರಾಟದ ಧ್ವನಿ ಕೇಳಿಸಿದ್ದು, ಕುತೂಹಲದಿಂದ ಅವರು ಹತ್ತಿರ ಹೋಗಿ ನೋಡಿದ್ದಾರೆ.ಈ ವೇಳೆ ಕಂಡುಬಂದ ದೃಶ್ಯದಿಂದ ಪುಳಕಗೊಂಡು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಗ್ರಾಮಸ್ಥರ ಪ್ರಕಾರ ಹೊಳೆಯಲ್ಲಿ ಮಡಿಕೇರಿ, ಸೆ. 6: ದಕ್ಷಿಣ ಕೊಡಗಿನ ಬೆಸಗೂರು ಗ್ರಾಮದಲ್ಲಿ ಕೀರೆಹೊಳೆಯ ನೀರಿನಲ್ಲಿ ಚೆಲ್ಲಾಟವಾಡುತ್ತಿರುವ ಅಪರೂಪದ ನೀರು ನಾಯಿಗಳು ಕಾಣಿಸಿಕೊಂಡಿವೆ. ಈ ಅಪರೂಪದ ದೃಶ್ಯವನ್ನು ಅಲ್ಲಿನ ನಿವಾಸಿ ಬಾಚಮಾಡ ಶರಣು ಭೀಮಯ್ಯ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭೀಮಯ್ಯ ಅವರ ಗದ್ದೆಗಳ ನಡುವೆ ಹರಿಯುವ ಕೀರೆಹೊಳೆ ನದಿ ಪಾತ್ರದಲ್ಲಿ ನೀರು ನಾಯಿಗಳ ಚೀರಾಟದ ಧ್ವನಿ ಕೇಳಿಸಿದ್ದು, ಕುತೂಹಲದಿಂದ ಅವರು ಹತ್ತಿರ ಹೋಗಿ ನೋಡಿದ್ದಾರೆ.

ಈ ವೇಳೆ ಕಂಡುಬಂದ ದೃಶ್ಯದಿಂದ ಪುಳಕಗೊಂಡು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಗ್ರಾಮಸ್ಥರ ಪ್ರಕಾರ ಹೊಳೆಯಲ್ಲಿ ಬೆಸಗೂರಿನಲ್ಲಿ ಮನಸೋ ಇಚ್ಚೆ ವಿಹರಿಸುತ್ತಿವೆಯಂತೆ.

ಈ ಚೆಲ್ಲಾಟದ ದೃಶ್ಯ ಕಂಡು ಗ್ರಾಮಸ್ಥರು ಅಚ್ಚರಿಯಿಂದ ವೀಕ್ಷಿಸಲು ಬರುತ್ತಿದ್ದರೆ; ಸುತ್ತ ಮುತ್ತಲಿನ ಇತರ ಗ್ರಾಮಗಳ ಜನರು ವಿಷಯ ತಿಳಿದು ಇತ್ತ ವೀಕ್ಷಣೆಗೆ ಬಂದು ಹಿಂತೆರಳುತ್ತಿದ್ದಾರೆ.