ಗೋಣಿಕೊಪ್ಪಲು, ಸೆ. 5: ವಾಣಿಜ್ಯ ನಗರದಲ್ಲಿ ಸಾರ್ವಜನಿಕರು ಬೈಕ್ ಪಾರ್ಕಿಂಗ್ ಮಾಡಿ ತೆರಳುತ್ತಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಯೋರ್ವ ನಿಲ್ಲಿಸಿದ್ದ ಬೈಕ್‍ಅನ್ನು ಕಳ್ಳತನ ಮಾಡುವುದರೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ದೂರು ಸಲ್ಲಿಸಿದ್ದರು. ಸಾರ್ವಜನಿಕರ ದೂರಿನ ಹಿನೆÀ್ನಲೆಯಲ್ಲಿ ಠಾಣಾಧಿಕಾರಿ ಸುರೇಶ್ ಬೋಪಣ್ಣ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದ.ಕೊಡಗಿನ ಕಾನೂರು ಬಳಿಯ ಮಲಯಾಳಿ ಪ್ರಕಾಶ್ ಎಂಬಾತ ಗೋಣಿಕೊಪ್ಪಲುವಿನ ಪೆಟ್ರೋಲ್ ಬಂಕ್ ಮುಂಭಾಗ ನಿಲ್ಲಿಸಿದ್ದ ಸ್ಪೋಟ್ರ್ಸ್ ಸ್ಟಾರ್ ಬೈಕ್‍ಅನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಬೈಕ್ ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್.ಐ. ಸುರೇಶ್ ಬೋಪಣ್ಣ, ಸಿಬ್ಬಂದಿಗಳಾದ ಹೆಚ್.ಕೆ. ಕೃಷ್ಣ,ಎಸ್.ಮಣಿಕಂಠ, ಕುಮಾರ್ ಭಾಗವಹಿಸಿದ್ದರು.