ಗೋಣಿಕೊಪ್ಪಲು, ಸೆ. 5: ಹೊರರಾಜ್ಯದ ಲಾಟರಿ ಟಿಕೆಟ್ಗಳನ್ನು ಅಕ್ರಮವಾಗಿ ತರುವ ಮೂಲಕ ಗೋಣಿಕೊಪ್ಪ ನಗರದಲ್ಲಿ ಮಾರಾಟ ಮಾಡುತ್ತಿದ್ದ ಗೋಣಿಕೊಪ್ಪಲುವಿನ ಮಲಯಾಳಿ ರಾಜು ಎಂಬಾತನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸುವುದರೊಂದಿಗೆ ಆರೋಪಿಯಿಂದ ಕೇರಳ ರಾಜ್ಯದ ಲಾಟರಿ ಟಿಕೇಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ರಾಜು ಈ ಹಿಂದಿನಿಂದಲೂ ಹೊರ ರಾಜ್ಯದ ಲಾಟರಿ ಟಿಕೇಟುಗಳನ್ನು ತಂದು ಮಾರಾಟ ಮಾಡುತ್ತಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾನೆ. ಕಾರ್ಯಾಚರಣೆಯಲ್ಲಿ ಎಸ್.ಐ. ಸುರೇಶ್ ಬೋಪಣ್ಣ, ಸಿಬ್ಬಂದಿಗಳಾದ ಹೆಚ್.ಕೆ.ಕೃಷ್ಣ, ಎಸ್.ಮಣಿಕಂಠ, ಕುಮಾರ್ ಭಾಗವಹಿಸಿದ್ದರು.